ಕೇಂದ್ರ ಬಜೆಟ್-2023-24: ರಾಷ್ಟ್ರಪತಿಗಳ ಗೃಹ ಖರ್ಚಿನಲ್ಲಿ 10 ಕೋಟಿ ರೂಪಾಯಿ ಕಡಿತ!

ರಾಷ್ಟ್ರಪತಿಗಳ ಗೃಹ ಖರ್ಚಿಗೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ 36.22 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಈ ಪೈಕಿ ಸಿಬ್ಬಂದಿಗಳ ವೇತನವೂ ಸೇರಿದೆ. 
ರಾಷ್ಟ್ರಪತಿಗಳ ನಿವಾಸ (ಸಂಗ್ರಹ ಚಿತ್ರ)
ರಾಷ್ಟ್ರಪತಿಗಳ ನಿವಾಸ (ಸಂಗ್ರಹ ಚಿತ್ರ)

ನವದೆಹಲಿ: ರಾಷ್ಟ್ರಪತಿಗಳ ಗೃಹ ಖರ್ಚಿಗೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ 36.22 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಈ ಪೈಕಿ ಸಿಬ್ಬಂದಿಗಳ ವೇತನವೂ ಸೇರಿದೆ. 

ಪ್ರಸಕ್ತ ಆರ್ಥಿಕ ವರ್ಷಕ್ಕೆ ರಾಷ್ಟ್ರಪತಿಗಳ ಮನೆ ನಿರ್ವಹಣೆಯ ಅನುದಾನವನ್ನು 10 ಕೋಟಿ ರೂಪಾಯಿ ವರೆಗೆ ಕಡಿತಗೊಳಿಸಲಾಗಿದೆ. 

ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ರಾಷ್ಟ್ರಪತಿಗಳ ಕಚೇರಿ ಹಾಗೂ ಇತರ ಖರ್ಚುಗಳಿಗಾಗಿ 90.14 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಕಳೆದ ಬಜೆಟ್ ನಲ್ಲಿ ನೀಡಲಾಗಿದ್ದ 84.8 ಕೋಟಿ ರೂಪಾಯಿ ಬಜೆಟ್ ಗಿಂತಲೂ ಈ ಬಾರಿ ಈ ಮೊತ್ತವನ್ನು 5.34 ಕೋಟಿಗೆ ಏರಿಕೆ ಮಾಡಲಾಗಿದೆ. 

ರಾಷ್ಟ್ರಪತಿಗಳಿಗೆ ವೇತನ ಹಾಗೂ ಭತ್ಯೆಗಳಿಗಾಗಿ 60 ಲಕ್ಷ ರೂಪಾಯಿಗಳನ್ನು ಘೋಷಿಸಲಾಗಿದೆ. ಇದೇ ವೇಳೆ ರಾಷ್ಟ್ರಪತಿಗಳ ಸಚಿವಾಲಯಕ್ಕೆ 53.32 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು ರಾಷ್ಟ್ರಪತಿಗಳ ಮನೆಯ ನಿರ್ವಹಣೆಗೆ 36.22 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಪೈಕಿ ಸಿಬ್ಬಂದಿಗಳ ವೇತನ  ವಿವೇಚನಾ ಅನುದಾನಗಳೂ ಸೇರಿವೆ. ಕಳೆದ ಬಜೆಟ್ ನಲ್ಲಿ ರಾಷ್ಟ್ರಪತಿಗಳ ಮನೆಯ ಖರ್ಚಿಗೆ 41.68 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com