2022-23ರ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅರ್ಜಿ ನಮೂನೆ ಪ್ರಕಟಿಸಿದ ಆದಾಯ ತೆರಿಗೆ ಇಲಾಖೆ

ಆದಾಯ ತೆರಿಗೆ ಇಲಾಖೆಯು 2022-23ರ ಆರ್ಥಿಕ ವರ್ಷಕ್ಕೆ ನಾಗರಿಕರು ಮತ್ತು ಉದ್ಯಮ ವಲಯದಿಂದ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಅರ್ಜಿಗಳ ಅಧಿಸೂಚನೆ ಹೊರಡಿಸಿದೆ. 
2022-23ರ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅರ್ಜಿ ನಮೂನೆ ಪ್ರಕಟಿಸಿದ ಆದಾಯ ತೆರಿಗೆ ಇಲಾಖೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯು 2022-23ರ ಆರ್ಥಿಕ ವರ್ಷಕ್ಕೆ ನಾಗರಿಕರು ಮತ್ತು ಉದ್ಯಮ ವಲಯದಿಂದ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಅರ್ಜಿಗಳ ಅಧಿಸೂಚನೆ ಹೊರಡಿಸಿದೆ. 

ಫೆಬ್ರವರಿ 10 ರ ಅಧಿಸೂಚನೆಯ ಮೂಲಕ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT), ITR ನಮೂನೆಗಳು 1-6, ITR-V (ಪರಿಶೀಲನಾ ನಮೂನೆ) ಮತ್ತು ITR ಸ್ವೀಕೃತಿ ನಮೂನೆಯನ್ನು ಸೂಚಿಸಿದೆ.

2023-24 (2022-23 ರಲ್ಲಿ ಗಳಿಸಿದ ಆದಾಯಕ್ಕಾಗಿ) ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳನ್ನು CBDT ಸಾಕಷ್ಟು ಮುಂಚೆಯೇ ಸೂಚಿಸಿದೆ ಎಂದು AMRG ಮತ್ತು ಅಸೋಸಿಯೇಟ್ಸ್ ಹಿರಿಯ ಪಾಲುದಾರ ರಜತ್ ಮೋಹನ್ ಹೇಳಿದ್ದಾರೆ, ಇದು ತೆರಿಗೆದಾರರು ಈ ವರ್ಷದ ಆರಂಭದಲ್ಲಿ ತಮ್ಮ ಆದಾಯದ ರಿಟರ್ನ್ಸ್ ಅನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ.

ಕಳೆದ ವರ್ಷ, ಅಂತಹ ನಮೂನೆಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ಹೊರಡಿಸಲಾಗಿತ್ತು. ಐಟಿಆರ್ ಫಾರ್ಮ್‌ಗಳ ಆರಂಭಿಕ ಅಧಿಸೂಚನೆಯು ಇ-ಫೈಲಿಂಗ್ ಪೋರ್ಟಲ್, ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಕಂಪನಿಗಳು, ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರು ಸೇರಿದಂತೆ ಎಲ್ಲಾ ಸಂಬಂಧಪಟ್ಟವರಿಗೆ ಸಾಕಷ್ಟು ಸಮಯ ನೀಡುತ್ತದೆ.

ಈ ವರ್ಷ, ಸಾಫ್ಟ್‌ವೇರ್ ಉದ್ಯಮಿಗಳು ಈ ಹೆಚ್ಚುವರಿ ಸಮಯವನ್ನು ಎಕ್ಸೆಲ್ ಯುಟಿಲಿಟಿ ಮತ್ತು ಥರ್ಡ್-ಪಾರ್ಟಿ ಸಾಫ್ಟ್‌ವೇರ್ ನ್ನು ಐಟಿಆರ್‌ಗಳನ್ನು ಸಲ್ಲಿಸಲು, ಮೊದಲೇ ಏನಾದರೂ ಲೋಪದೋಷವಿದ್ದರೆ ಸರಿಪಡಿಸಿಕೊಳ್ಳಲು ಬಳಸಿಕೊಳ್ಳಬಹುದು" ಎಂದು ರಜತ್ ಮೋಹನ್ ಹೇಳುತ್ತಾರೆ. 

ITR-1 ಮತ್ತು ITR-4 ಸರಳವಾದ ರೂಪಗಳಾಗಿವೆ, ಇದು ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ತೆರಿಗೆದಾರರನ್ನು ಪೂರೈಸುತ್ತದೆ. ಐಟಿಆರ್-1 ನ್ನು 50 ಲಕ್ಷದವರೆಗೆ ಆದಾಯ ಹೊಂದಿರುವ ಮತ್ತು ವೇತನ, ಮನೆ ಆಸ್ತಿ ಮತ್ತು ಇತರ ಮೂಲಗಳಿಂದ (ಬಡ್ಡಿ, ಇತ್ಯಾದಿ) ಆದಾಯವನ್ನು ಪಡೆಯುವ ವ್ಯಕ್ತಿಯಿಂದ ಸಲ್ಲಿಸಬಹುದು.

ITR-4 ನ್ನು ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು (HUF ಗಳು) ಮತ್ತು ಒಟ್ಟು 50 ಲಕ್ಷ ರೂಪಾಯಿವರೆಗಿನ ಆದಾಯ ಮತ್ತು ವ್ಯಾಪಾರ ಮತ್ತು ವೃತ್ತಿಯಿಂದ ಆದಾಯ ಹೊಂದಿರುವ ಸಂಸ್ಥೆಗಳು ಸಲ್ಲಿಸಬಹುದು.

ITR-2 ನ್ನು ವಸತಿ ಆಸ್ತಿಯಿಂದ ಆದಾಯ ಹೊಂದಿರುವ ಜನರು ಸಲ್ಲಿಸಿದರೆ, ITR-3ನ್ನು ವೃತ್ತಿಪರರು ಸಲ್ಲಿಸುತ್ತಾರೆ. ITR-5 ಮತ್ತು ITR-6 ನ್ನು LLP ಗಳು ಮತ್ತು ವ್ಯವಹಾರಗಳು ಸಲ್ಲಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com