ಉದ್ಯೋಗ ಕತ್ತರಿ ಟ್ರೆಂಡ್ ಗೆ ವ್ಯತಿರಿಕ್ತ; 800 ಮಂದಿಗೆ ನೌಕರಿ ನೀಡಲು ಜೊಮ್ಯಾಟೋ ಮುಂದು

ಜಾಗತಿಕವಾಗಿ ದೊಡ್ಡ ಸಂಸ್ಥೆಗಳು ಉದ್ಯೋಗಗಳನ್ನು ತೆಗೆಯುತ್ತಿದ್ದರೆ, ಜೊಮ್ಯಾಟೋ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಒಂದಷ್ಟು ಮಂದಿಗೆ ಉದ್ಯೋಗ ನೀಡಲು ಮುಂದಾಗಿದೆ. 
ಜೊಮ್ಯಾಟೋ
ಜೊಮ್ಯಾಟೋ

ಬೆಂಗಳೂರು: ಜಾಗತಿಕವಾಗಿ ದೊಡ್ಡ ಸಂಸ್ಥೆಗಳು ಉದ್ಯೋಗಗಳನ್ನು ತೆಗೆಯುತ್ತಿದ್ದರೆ, ಜೊಮ್ಯಾಟೋ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಒಂದಷ್ಟು ಮಂದಿಗೆ ಉದ್ಯೋಗ ನೀಡಲು ಮುಂದಾಗಿದೆ. 

ಜೊಮ್ಯಾಟೋದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ದೀಪಿಂದರ್ ಗೋಯಲ್, ಲಿಂಕ್ಡ್ ಇನ್ ನಲ್ಲಿ ಬರೆದಿದ್ದು, ಸಂಸ್ಥೆ 800 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ. ಇಂಜಿನಿಯರ್ ಗಳು, ಪ್ರಾಡಕ್ಟ್ ಮ್ಯಾನೇಜರ್, ಗ್ರೋಥ್ ಮ್ಯಾನೇಜರ್ ಹಾಗೂ ಇತರ ಹುದ್ದೆಗಳು ಖಾಲಿ ಇವೆ ಎಂದು ಗೋಯಲ್ ತಿಳಿಸಿದ್ದಾರೆ. 

ಆಹಾರ ಅಗ್ರಿಗೇಟರ್ ಸಂಸ್ಥೆಯ ಸಿಇಒ ನೀಡಿರುವ ಮಾಹಿತಿಯ ಪ್ರಕಾರ, 5 ವಿಭಿನ್ನ ಜವಾಬ್ದಾರಿಗಳ ಹುದ್ದೆಗಳು ಖಾಲಿ ಇದ್ದು, ಪ್ರಾಡಕ್ಟ್ ಓನರ್, ಸಾಫ್ಟ್ ವೇರ್ ಡೆವಲಪ್ಮೆಂಟ್ ಇಂಜಿನಿಯರ್ ಗಳೂ ಈ ಪೈಕಿ ಇದೆ ಎಂದು ಹೇಳಿದ್ದಾರೆ. 

ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಲ್ಲಿ ಆಸಕ್ತಿ ಇದ್ದಲ್ಲಿ, deepinder@zomato.com ಮೇಲ್ ಐಡಿ ಗೆ ಮೇಲ್ ಮಾಡಿ ಎಂದು ಗೋಯಲ್ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. 

ಜೊಮ್ಯಾಟೋ ತನ್ನ ಉದ್ಯಮವನ್ನು ಮರುಬ್ರಾಂಡಿಂಗ್ ಮಾಡುತ್ತಿದ್ದು, ತನ್ನ ಪಾಲುದಾರ ರೆಸ್ಟೋರೆಂಟ್ ಗಳೊಂದಿಗೆ ಹೊಸ ಮೆನು (ಆಯ್ಕೆಗಳಿಗೆ) ಸಂಬಂಧಿಸಿದಂತೆ ಕೆಲಸ ಮಾಡುತ್ತಿದೆ. ತನ್ನ ಮರುಬ್ರಾಂಡಿಂಗ್ ಗೆ ಸಂಬಂಧಿಸಿದಂತೆ ಜೊಮ್ಯಾಟೋ 10 ನಿಮಿಷಗಳ ಆಹಾರ ಡೆಲಿವರಿ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂಬ ವರದಿಗಳು ತಿಳಿಸಿವೆ. 

10 ನಿಮಿಷಗಳ ಆಹಾರ ಡೆಲಿವರಿಯನ್ನು ಜಾರಿಗೆ ತರುತ್ತಿರುವುದಾಗಿ ಕಳೆದ ಮಾರ್ಚ್ ನಲ್ಲಿ ಜೊಮ್ಯಾಟೋ ಘೋಷಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com