OLX Layoff: ಒಎಲ್ಎಕ್ಸ್ನಲ್ಲೂ ಉದ್ಯೋಗ ಕಡಿತ; 1,500 ಸಿಬ್ಬಂದಿ ವಜಾ
ಜಾಗತಿಕ ಆರ್ಥಿಕ ಹಿನ್ನಡೆ ಜಗತ್ತಿನ ದೈತ್ಯ ಕಂಪೆನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಸಿಬ್ಬಂದಿಗಳ ವಜಾ ಪ್ರಹಸನ ಮುಂದುವರೆದಿರುವಂತೆಯೇ ಇತ್ತ ಒಎಲ್ಎಕ್ಸ್ ಕೂಡ ಸಿಬ್ಬಂದಿ ವಜಾಗೆ ಮುಂದಾಗಿದೆ.
Published: 31st January 2023 03:35 PM | Last Updated: 31st January 2023 05:26 PM | A+A A-

ಒಎಲ್ ಎಕ್ಸ್
ವಾಷಿಂಗ್ಟನ್: ಜಾಗತಿಕ ಆರ್ಥಿಕ ಹಿನ್ನಡೆ ಜಗತ್ತಿನ ದೈತ್ಯ ಕಂಪೆನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಸಿಬ್ಬಂದಿಗಳ ವಜಾ ಪ್ರಹಸನ ಮುಂದುವರೆದಿರುವಂತೆಯೇ ಇತ್ತ ಒಎಲ್ಎಕ್ಸ್ ಕೂಡ ಸಿಬ್ಬಂದಿ ವಜಾಗೆ ಮುಂದಾಗಿದೆ.
ಹೌದು,, ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತ ಮುಂದುವರಿದಿರುವ ಬೆನ್ನಲ್ಲೇ ಜಾಗತಿಕವಾಗಿ ಶೇ 15ರಷ್ಟು, ಅಂದರೆ 1,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ (Layoff) ಒಎಲ್ಎಕ್ಸ್ಗ್ರೂಪ್ (OLX Group) ಘೋಷಿಸಿದೆ. ಜಾಗತಿಕವಾಗಿ ಶೇ 15ರಷ್ಟು, ಅಂದರೆ 1,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಒಎಲ್ಎಕ್ಸ್ ಗ್ರೂಪ್ ಘೋಷಿಸಿದೆ.
ಬೇಡಿಕೆ ಕುಸಿತದ ಕಾರಣ ಕಂಪನಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದ್ದು, ಸ್ಥೂಲ ಆರ್ಥಿಕತೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವೆಚ್ಚ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಒಎಲ್ಎಕ್ಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಜರ್ಮನಿಯ ಸಾಫ್ಟ್ ವೇರ್ ದಿಗ್ಗಜ ಸಂಸ್ಥೆ ಎಸ್ಎಪಿಯಿಂದ 3 ಸಾವಿರ ಉದ್ಯೋಗ ಕಡಿತ
'ಉದ್ಯೋಗ ಕಡಿತದ ಬಗ್ಗೆ ವಿಷಾದವಿದೆ. ಕಂಪನಿಗೆ ಅಮೂಲ್ಯ ಕೊಡುಗೆ ನೀಡಿದ್ದವರನ್ನು ವಜಾಗೊಳಿಸುತ್ತಿರುವುದಕ್ಕೆ ಕ್ಷಮೆ ಇರಲಿ. ಭವಿಷ್ಯದ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಇದು ನಮಗೆ ಅನಿವಾರ್ಯ ನಿರ್ಧಾರವಾಗಿದೆ. ವಜಾ ಪ್ರಕ್ರಿಯೆಯ ವೇಳೆ ನಮ್ಮ ಉದ್ಯೋಗಿಗಳನ್ನು ನ್ಯಾಯಯುತವಾಗಿ ಮತ್ತು ಘನತೆಯಿಂದ ನಡೆಸಿಕೊಳ್ಳಲಿದ್ದೇವೆ' ಎಂದು ಅವರು ಹೇಳಿದ್ದಾರೆ.
Joining the mass layoff season, online marketplace #OLX Group is slashing 15 per cent of its workforce, or more than 1,500 employees, globally including in #India as part of restructuring amid the global meltdown and recession fears.#Layoffs pic.twitter.com/zBfHRtWE8q
— IANS (@ians_india) January 31, 2023
ಉದ್ಯೋಗ ಕಡಿತವು ಒಎಲ್ಎಕ್ಸ್ ಆಟೋಸ್ ಹಾಗೂ ಒಎಲ್ಎಕ್ಸ್ನ ಭಾರತದ ಘಟಕದ ಮೇಲೂ ಪರಿಣಾಮ ಬೀರಲಿವೆ. 2006ರಲ್ಲಿ ಆರಂಭವಾಗಿದ್ದ ಕಂಪನಿ 2009ರಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶಿಸಿತ್ತು.
ಇದನ್ನೂ ಓದಿ: ಉದ್ಯೋಗ ಕತ್ತರಿ ಟ್ರೆಂಡ್ ಗೆ ವ್ಯತಿರಿಕ್ತ; 800 ಮಂದಿಗೆ ನೌಕರಿ ನೀಡಲು ಜೊಮ್ಯಾಟೋ ಮುಂದು
ಉದ್ಯೋಗ ಕಡಿತ ಪ್ರಹಸನ
ಸೋಮವಾರವಷ್ಟೇ ಡಚ್ ಕಂಪನಿ ಫಿಲಿಪ್ಸ್ ಎರಡನೇ ಸುತ್ತಿನಲ್ಲಿ 6,000 ಉದ್ಯೋಗಿಗಳ ವಜಾ ನಿರ್ಧಾರ ಪ್ರಕಟಿಸಿತ್ತು. ಲಾಭದಲ್ಲಿ ಕುಸಿತ, ರೋಗಿಗಳಿಗೆ ನಿದ್ರೆ ಸಂದರ್ಭದಲ್ಲಿ ಉಸಿರಾಟಕ್ಕೆ ಅನುವು ಮಾಡಿಕೊಡುವ ಸಾಧನಗಳಲ್ಲಿ ಲೋಪ ಇದ್ದು ಅದನ್ನು ವಾಪಸ್ ಪಡೆಯಬೇಕಾಗಿ ಬಂದುದು ಇತ್ಯಾದಿ ಕಾರಣಗಳಿಂದ ಕಂಪನಿಯು ಉದ್ಯೋಗ ಕಡಿತದ ಮೊರೆ ಹೋಗಿತ್ತು.
ಇತ್ತೀಚೆಗಷ್ಟೇ ಅಲ್ಫಾಬೆಟ್ನ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ನ ಜರ್ಮನ್ ಸಾಫ್ಟ್ವೇರ್ ಕಂಪನಿ ಎಸ್ಎಪಿ ಉದ್ಯೋಗ ಕಡಿತ ಘೋಷಿಸಿದ್ದವು. ಇದೀಗ ಒಎಲ್ಎಕ್ಸ್ ಕೂಡ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಪ್ರಕಟಿಸಿದ್ದು, 2023ರಲ್ಲಿ ಉದ್ಯೋಗ ಕಡಿತದ ಪರ್ವ ಮುಂದುವರಿಯುವ ಸೂಚನೆ ನೀಡಿದೆ. ಕಳೆದ ವಾರ ಇಂಟರ್ನ್ಯಾಷನಲ್ ಬ್ಯುಸಿನೆಸ್ ಮಷಿನ್ಸ್ ಕಾರ್ಪೊರೇಷನ್ 3,900 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಇದನ್ನೂ ಓದಿ: ಮ್ಯೂಸಿಕ್ ಸ್ಟ್ರೀಮಿಂಗ್ ಸಂಸ್ಥೆ Spotify ನ ಶೇ.6 ರಷ್ಟು ಉದ್ಯೋಗಿಗಳು ವಜಾ
2023ರ ಮೊದಲ 15 ದಿನಗಳಲ್ಲಿ ಜಾಗತಿಕವಾಗಿ 91 ಕಂಪನಿಗಳು 24,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದೀಗ 2023ರ ಜನವರಿ ತಿಂಗಳ ಉತ್ತರಾರ್ಧದಲ್ಲಿಯೂ ಉದ್ಯೋಗ ಕಡಿತ ಮುಂದುವರಿದಿದೆ.