ಮಾರ್ಚ್ 10 ರವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ಶೇ.17 ರಷ್ಟು ಹೆಚ್ಚಳ
2022-23ರಲ್ಲಿ ಸರ್ಕಾರವು ತನ್ನ ಪರಿಷ್ಕೃತ ನೇರ ತೆರಿಗೆ ಸಂಗ್ರಹದ ಗುರಿ ರೂ. 16.5 ಲಕ್ಷ ಕೋಟಿ ಸಾಧಿಸುವ ಸಾಧ್ಯತೆಯಿದೆ. ನಿನ್ನೆಯವರೆಗೂ ನೇರ ತೆರಿಗೆ ಸಂಗ್ರಹ ರೂ. 13.73 ಲಕ್ಷ ಕೋಟಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ.
Published: 11th March 2023 02:56 PM | Last Updated: 11th March 2023 03:47 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: 2022-23ರಲ್ಲಿ ಸರ್ಕಾರವು ತನ್ನ ಪರಿಷ್ಕೃತ ನೇರ ತೆರಿಗೆ ಸಂಗ್ರಹದ ಗುರಿ ರೂ.16.5 ಲಕ್ಷ ಕೋಟಿ ಸಾಧಿಸುವ ಸಾಧ್ಯತೆಯಿದೆ. ನಿನ್ನೆಯವರೆಗೂ ನೇರ ತೆರಿಗೆ ಸಂಗ್ರಹ ರೂ.13.73 ಲಕ್ಷ ಕೋಟಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ ತೆರಿಗೆ ಸಂಗ್ರಹಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ ಮತ್ತು ವರ್ಷಕ್ಕೆ ಪರಿಷ್ಕೃತ ಗುರಿ ಸಾಧಿಸಲು ಸರ್ಕಾರ ಆಶಿಸುತ್ತಿದೆ.
ನಿನ್ನೆಯವರೆಗೆ ನೇರ ತೆರಿಗೆ ಸಂಗ್ರಹಣೆಗಳ ತಾತ್ಕಾಲಿಕ ಅಂಕಿ ಅಂಶಗಳ ಒಟ್ಟು ಸಂಗ್ರಹಣೆ ರೂ. 16.68 ಲಕ್ಷ ಕೋಟಿಯಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಯ ಒಟ್ಟು ಸಂಗ್ರಹಣೆಗಿಂತ ಶೇ.22.58 ರಷ್ಟು ಹೆಚ್ಚಾಗಿದೆ. ನೇರ ತೆರಿಗೆ ಒಟ್ಟು ಮರುಪಾವತಿ ರೂ.13.73 ಲಕ್ಷ ಕೋಟಿಯಾಗಿದ್ದು, ಕಳೆದ ವರ್ಷದ ಒಟ್ಟು ಸಂಗ್ರಹಕ್ಕಿಂತ ಶೇ. 16.78 ರಷ್ಟು ಹೆಚ್ಚಾಗಿದೆ.
ಕಾರ್ಪೊರೇಟ್ ತೆರಿಗೆ ಸಂಗ್ರಹಗಳು ಶೇ.18.08 ರಷ್ಟು ಹೆಚ್ಚಾಗಿದ್ದರೆ, ವೈಯಕ್ತಿಕ ಆದಾಯ ತೆರಿಗೆ ಶೇ. 27.57 ರಷ್ಟು ಹೆಚ್ಚಾಗಿದೆ. ಮರುಪಾವತಿಗಳ ಹೊಂದಾಣಿಕೆಯ ನಂತರ, ಕಾರ್ಪೊರೇಟ್ ತೆರಿಗೆ ಸಂಗ್ರಹಗಳಲ್ಲಿ ನಿವ್ವಳ ಬೆಳವಣಿಗೆಯು ಶೇ. 13.62 ಮತ್ತು ವೈಯಕ್ತಿಕ ಆದಾಯ ತೆರಿಗೆಯಲ್ಲಿ ಜಿಎಸ್ ಟಿ ಸೇರಿದಂತೆ ಶೇ. 20.06 ರಷ್ಟಾಗಿದೆ.
ಇದನ್ನೂ ಓದಿ: ನವದೆಹಲಿ: ರೂ.16,692 ಕೋಟಿ ಜಿಎಸ್ ಟಿ ಪರಿಹಾರದ ಬಾಕಿ ಹಣ ಪಾವತಿ- ನಿರ್ಮಲಾ ಸೀತಾರಾಮನ್
1 ಏಪ್ರಿಲ್ 2022 ರಿಂದ 10 ಮಾರ್ಚ್ 2023 ರ ಅವಧಿಯಲ್ಲಿ ರೂ.2.95 ಲಕ್ಷ ಕೋಟಿ ಮೊತ್ತದ ಮರುಪಾವತಿಗಳನ್ನು ನೀಡಲಾಗಿದೆ, ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ನೀಡಲಾದ ಮರುಪಾವತಿಗಳಿಗಿಂತ ಶೇ.59.44 ರಷ್ಟು ಹೆಚ್ಚಾಗಿದೆ.