ಸಗಟು ಹಣದುಬ್ಬರ 2 ವರ್ಷಗಳಲ್ಲೇ ಅತ್ಯಧಿಕ ಕುಸಿತ!

ಸಗಟು ಹಣದುಬ್ಬರ 2 ವರ್ಷಗಳಲ್ಲೇ ಅತ್ಯಧಿಕ ಕುಸಿತ ಕಂಡಿದೆ. 
ಸಗಟು ಹಣದುಬ್ಬರ (ಸಾಂಕೇತಿಕ ಚಿತ್ರ)
ಸಗಟು ಹಣದುಬ್ಬರ (ಸಾಂಕೇತಿಕ ಚಿತ್ರ)

ನವದೆಹಲಿ: ಸಗಟು ಹಣದುಬ್ಬರ 2 ವರ್ಷಗಳಲ್ಲೇ ಅತ್ಯಧಿಕ ಕುಸಿತ ಕಂಡಿದೆ. ಜನವರಿ ತಿಂಗಳ ಸಗಟು ಹಣದುಬ್ಬರ ಸೂಚ್ಯಂಕ ಶೇ.3.85 ಕ್ಕೆ ಕುಸಿದಿದ್ದು, ಉತ್ಪಾದಿತ ವಸ್ತುಗಳ ಬೆಲೆ, ಇಂಧನ, ವಿದ್ಯುತ್ ಬೆಲೆ ಕಡಿಮೆಯಾಗಿರುವ ಪರಿಣಾಮ ಎಂದು ವಿಶ್ಲೇಷಿಸಲಾಗುತ್ತಿದೆ.

ಸತತ 9 ನೇ ತಿಂಗಳು ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಹಣದುಬ್ಬರ ಇಳಿಕೆ ಕಂಡಿದೆ. ಕಳೆದ ವರ್ಷ ಡಬ್ಲ್ಯುಪಿಐ ಹಣದುಬ್ಬರ ಶೇ.4.73 ರಷ್ಟಿತ್ತು ಹಾಗೂ ಫೆಬ್ರವರಿ ತಿಂಗಳಲ್ಲಿ ಶೇ.13.43 ರಷ್ಟಿತ್ತು. 

ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲಗಳ ಬೆಲೆ, ಆಹಾರೇತರ ಪದಾರ್ಥಗಳು, ಆಹಾರ ಪದಾರ್ಥಗಳು, ಖನಿಜಗಳು, ಕಂಪ್ಯೂಟರ್, ಎಲೆಕ್ಟ್ರಾನಿಕ್ ಮತ್ತು ಆಪ್ಟಿಕಲ್ ಉತ್ಪನ್ನಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ವಿದ್ಯುತ್ ಉಪಕರಣಗಳು ಮತ್ತು ಮೋಟಾರು ವಾಹನಗಳ ಬೆಲೆ ಇಳಿಕೆಯ ಪರಿಣಾಮವಾಗಿ 2023 ರ ಫೆಬ್ರವರಿ ತಿಂಗಳಲ್ಲಿನ ಹಣದುಬ್ಬರ ಇಳಿಕೆಯಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಮಂಗಳವಾರ ತಿಳಿಸಿದೆ.

2021 ಜನವರಿಯಿಂದ ಇದೇ ಮೊದಲ ಬಾರಿಗೆ ಡಬ್ಲ್ಯುಪಿಐ ಹಣದುಬ್ಬರ ಶೇ.3.85 ಕ್ಕೆ ಇಳಿಕೆ ಕಂಡಿದೆ. ಸರಕುಗಳ ಬೆಲೆಗಳ ಇಳಿಕೆಯಿಂದಾಗಿ ಡಬ್ಲ್ಯುಪಿಐ ಹಣದುಬ್ಬರ ಇನ್ನೂ ಕಡಿಮೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಆದಾಗ್ಯೂ, ಆಹಾರ ಹಣದುಬ್ಬರದ ಭವಿಷ್ಯದ ಹವಾಮಾನ ಸಂಬಂಧಿತ ಪರಿಸ್ಥಿತಿಗಳು ಮತ್ತು ಸಕಾಲಿಕ ಮುಂಗಾರಿನ ಮೇಲೆ ಅವಲಂಬಿಸಿರುತ್ತದೆ ಎಂದು ವಿಶ್ಲೇಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com