ನವದೆಹಲಿ: "ಒಟ್ಟಾರೆ ಹಣದುಬ್ಬರ, ಸರ್ಕಾರದ ನೀತಿಗಳು ಮತ್ತು ಉತ್ಪಾದನಾ ವೆಚ್ಚವನ್ನು" ಭಾಗಶಃ ಸರಿದೂಗಿಸಲು ಏಪ್ರಿಲ್‌ನಲ್ಲಿ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆ ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಗುರುವಾರ ಹೇಳಿದೆ.
ಆದಾಗ್ಯೂ, ಮುಂದಿನ ತಿಂಗಳಿನಿಂದ ಹೆಚ್ಚಿಸಲು ಉದ್ದೇಶಿಸಿರುವ ಮಾರುತಿ ಸುಜುಕಿ, ಎಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆಯಾಗಲಿದೆ ಎಂಬುದನ್ನು ಮಾತ್ರಿ ತಿಳಿಸಿಲ್ಲ.
ಪ್ರಮುಖ ಕಾರು ತಯಾರಿಕಾ ಕಂಪನಿಯು ಉತ್ಪಾದನಾ ವೆಚ್ಚ ಹೆಚ್ಚಳದಿಂದ ಆಗುತ್ತಿರುವ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದೆ.
ಈಗಾಗಲೇ ಹೋಂಡಾ ಕಾರ್ಸ್, ಟಾಟಾ ಮೋಟಾರ್ಸ್ ಮತ್ತು ಹೀರೋ ಮೋಟೋಕಾರ್ಪ್ ಸೇರಿದಂತೆ ಹಲವಾರು ವಾಹನ ತಯಾರಕ ಕಂಪನಿಗಳು ಏಪ್ರಿಲ್‌ನಿಂದ ಬೆಲೆ ಹೆಚ್ಚಳ ಮಾಡುವುದಾಗಿ ಘೋಷಿಸಿವೆ.
Advertisement