ವಿತ್ತೀಯ ವರ್ಷದ ಕೊನೆಯ ದಿನ; ಸೆನ್ಸೆಕ್ಸ್ 1 ಸಾವಿರ ಅಂಕ ಏರಿಕೆ

ವಿತ್ತೀಯ ವರ್ಷದ ಕೊನೆಯ ದಿನೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು, ಸೆನ್ಸೆಕ್ಸ್ 1 ಸಾವಿರ ಅಂಕ ಏರಿಕೆ ಕಂಡಿದೆ.
ಭಾರತೀಯ ಷೇರುಮಾರುಕಟ್ಟೆ
ಭಾರತೀಯ ಷೇರುಮಾರುಕಟ್ಟೆ

ಮುಂಬೈ: ವಿತ್ತೀಯ ವರ್ಷದ ಕೊನೆಯ ದಿನೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು, ಸೆನ್ಸೆಕ್ಸ್ 1 ಸಾವಿರ ಅಂಕ ಏರಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿನ ದೃಢವಾದ ಪ್ರವೃತ್ತಿ ಮತ್ತು ಸೂಚ್ಯಂಕ ಪ್ರಮುಖ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಭಾರೀ ಖರೀದಿಗೆ ಅನುಗುಣವಾಗಿ ಭಾರತೀಯ ಷೇರುಮಾರುಕಟ್ಟೆ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 2022-23 ಹಣಕಾಸು ವರ್ಷದ ಕೊನೆಯ ದಿನವಾದ ಶುಕ್ರವಾರ ಶೇಕಡಾ 2 ರಷ್ಟು ಏರಿಕೆಯೊದಿಗೆ ವಹಿವಾಟು ಕೊನೆಗೊಳಿಸಿದವು.

ಬಿಎಸ್‌ಇ ಸೆನ್ಸೆಕ್ಸ್ 1,031.43 ಅಂಕಗಳು ಅಂದರೆ ಶೇ.1.78 ಏರಿಕೆ ಕಂಡು 58,991.52 ಕ್ಕೆ ಕೊನೆಗೊಂಡಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,108.38 ಅಂಕಗಳ ಏರಿಕೆಯೊಂದಿಗೆ 59,068.47 ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 279.05 ಪಾಯಿಂಟ್‌ಗಳು ಅಥವಾ 1.63 ರಷ್ಟು ಏರಿಕೆಯಾಗಿ 17,359.75 ಕ್ಕೆ ಕೊನೆಗೊಂಡಿತು.

ವಿದೇಶಿ ನಿಧಿಯ ಒಳಹರಿವು ಕೂಡ ಈಕ್ವಿಟಿ ಮಾರುಕಟ್ಟೆಯಲ್ಲಿ ಧನಾತ್ಮಕ ವಹಿವಾಟು ಹೆಚ್ಚಿಸಿದ್ದು, ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ 4 ರಷ್ಟು ಜಿಗಿದಿದ್ದರಿಂದ ಅತಿ ಹೆಚ್ಚು ಲಾಭ ಗಳಿಸಿದ ಸಂಸ್ಥೆಯಾಗಿ ಹೊರಹೊಮ್ಮಿದೆ. ಉಳಿದಂತೆನೆಸ್ಲೆ, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಮೌಲ್ಯಗಳು ಏರಿಕೆ ಕಂಡಿವೆ. ಇದಲ್ಲದೇ ಸನ್ ಫಾರ್ಮಾ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್ ಮತ್ತು ಟೈಟಾನ್ ಸಂಸ್ಥೆಗಳ ಷೇರುಮೌಲ್ಯ ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com