130 ಮಿಲಿಯನ್ ಡಾಲರ್ ಸಾಲ ಪೂರ್ವಪಾವತಿಗೆ ಅದಾನಿ ಸಮೂಹ ಮುಂದು

ಯುಎಸ್ ಶಾರ್ಟ್ ಸೆಲ್ಲರ್ ನಿಂದ ಆರೋಪಕ್ಕೆ ಗುರಿಯಾಗಿ, ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸಲು ಎದುರು ನೋಡುತ್ತಿರುವ ಗೌತಮ್ ಅದಾನಿ ಸಮೂಹವು 130 ಮಿಲಿಯನ್ ಡಾಲರ್ ಸಾಲ ಪೂರ್ವ ಪಾವತಿ ಮಾಡುವುದಾಗಿ ಮಂಗಳವಾರ ಹೇಳಿದೆ.  
ಗೌತಮ್ ಅದಾನಿ
ಗೌತಮ್ ಅದಾನಿ

ಮುಂಬೈ: ಯುಎಸ್ ಶಾರ್ಟ್ ಸೆಲ್ಲರ್ ನಿಂದ ಆರೋಪಕ್ಕೆ ಗುರಿಯಾಗಿ, ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸಲು ಎದುರು ನೋಡುತ್ತಿರುವ ಗೌತಮ್ ಅದಾನಿ ಸಮೂಹವು 130 ಮಿಲಿಯನ್ ಡಾಲರ್ ಸಾಲ ಪೂರ್ವ ಪಾವತಿ ಮಾಡುವುದಾಗಿ ಮಂಗಳವಾರ ಹೇಳಿದೆ.  

ಅದಾನಿ ಸಮೂಹದ ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಕಂಪನಿ, ಜುಲೈ 2024 ರ ಬಾಂಡ್‌ಗಳ 130 ಮಿಲಿಯನ್‌ ಡಾಲರ್ ನಷ್ಟು ಹಣವನ್ನು ಹಿಂಪಡೆಯಲು ಕಳೆದ ತಿಂಗಳು ಟೆಂಡರ್ ಕರೆದಿತ್ತು. ಹಣದ ಪರಿಸ್ಥಿತಿಯಲ್ಲಿ ತೊಂದರೆ ಇಲ್ಲ ಎಂಬುದನ್ನು ತೋರಿಸುವ ಮೂಲಕ ಮತ್ತೆ ಹೂಡಿಕೆದಾರರ ಆತ್ಮವಿಶ್ವಾಸ ಮೂಡಿಸಲು ಎದುರು ನೋಡಿತ್ತು.

ಒಟ್ಟು 412.7 ಮಿಲಿಯನ್ ಅಮೆರಿಕನ್ ಡಾಲರ್ ಮೂಲ ಮೊತ್ತವನ್ನು ದರಖಾಸ್ತು ಮಾಡಲಾಗಿದೆ ಎಂದು ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಕಂಪನಿ ಸ್ಟಾಕ್ ಎಕ್ಸ್ ಚೆಂಜ್ ನಲ್ಲಿ ಹೇಳಿತ್ತು.

ಅದಾನಿ ಕಂಪನಿಗಳ ಷೇರುಗಳ ಲೆಕ್ಕದಲ್ಲಿ ವಂಚನೆ, ತಿರುಚಲಾಗಿದೆ ಎಂದು ಜನವರಿ 24 ರ ಹಿಂಡನ್ ಬರ್ಗ್ ರಿಸರ್ಚ್ ವರದಿಯಲ್ಲಿ ಆರೋಪಿಸಿದ ನಂತರ ಅದಾನಿ ಗ್ರೂಪ್ ಷೇರುಗಳು ತೀವ್ರ ರೀತಿಯಲ್ಲಿ ಕುಸಿಯಲು ಆರಂಭಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com