
ಅದಾನಿ- ಷೇರು ಮಾರುಕಟ್ಟೆ (ಸಂಗ್ರಹ ಚಿತ್ರ)
ಮುಂಬೈ: ಅದಾನಿ ಸಮೂಹದ ಎಲ್ಲಾ ಷೇರುಗಳು ಪುಟಿದೆದ್ದಿವೆ. ಮಂಗಳವಾರದ ಬೆಳಗಿನ ವಹಿವಾಟಿನಲ್ಲಿ ಅದಾನಿ ಎಂಟರ್ಪ್ರೈಸಸ್ ನ ಷೇರುಗಳು ಶೇ.18 ರಷ್ಟು ಏರಿಕೆ ಕಂಡಿದೆ.
ಅದಾನಿ-ಹಿಂಡೆನ್‌ಬರ್ಗ್ ಸಂಶೋಧನಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ಸುಪ್ರೀಂ ಕೋರ್ಟ್ ಸಮಿತಿಯ ವರದಿ ಹೊರಬಂದ ನಂತರ ಅದಾನಿ ಗ್ರೂಪ್‌ನ ಷೇರುಗಳು ಮೇಲ್ಮುಖವಾಗಿ ಏರುತ್ತಿದೆ.
ಇದನ್ನೂ ಓದಿ: ಅದಾನಿ ಷೇರುಗಳಲ್ಲಿ ಶೇಕಡ 17ರಷ್ಟು ಏರಿಕೆ: 10 ಲಕ್ಷ ಕೋಟಿ ರೂ. ದಾಟಿದ ಮಾರುಕಟ್ಟೆ ಮೌಲ್ಯ!
ಬಿಎಸ್ಇ ಯಲ್ಲಿ ಅದಾನಿ ಎಂಟರ್ ಪ್ರೈಸಸ್ ನ ಷೇರುಗಳು ಶೇ.17,65 ರಷ್ಟು ಏರಿಕೆ ಕಂಡಿದ್ದರೆ, ಅದಾನಿ ವಿಲ್ಮರ್ ನ ಷೇರುಗಳು ಶೇ.9.99 ರಷ್ಟು ಏರಿಕೆ ಕಂಡಿದ್ದರೆ, ಅದಾನಿ ಪೋರ್ಟ್ಸ್ ಶೇ.7.71, ಅದಾನಿ ಪವರ್ ಶೇ.5, ಅದಾನಿ ಟ್ರಾನ್ಸ್‌ಮಿಷನ್ ಶೇ. 5, ಅದಾನಿ ಗ್ರೀನ್ ಶೇ.5, ಅದಾನಿ ಟೋಟಲ್ ಗ್ಯಾಸ್ ಶೇ.5 ಮತ್ತು ಎನ್‌ಡಿಟಿವಿ ಶೇ.4.99ಕ್ಕೆ ಏರಿಕೆಯಾಗಿದೆ.
ಬೆಳಗಿನ ವಹಿವಾಟಿನ ಸಮಯದಲ್ಲಿ ಸಮೂಹದ ಕೆಲವು ಸಂಸ್ಥೆಗಳ ಷೇರುಗಳು ತಮ್ಮ ಮೇಲಿನ ಸರ್ಕ್ಯೂಟ್ ಮಿತಿಗಳನ್ನು ಸಹ ತಲುಪಿದ್ದು, ಅಂಬುಜಾ ಸಿಮೆಂಟ್ಸ್ ಷೇರು ಶೇ.4ರಷ್ಟು ಮತ್ತು ಎಸಿಸಿ ಶೇ.2.87ರಷ್ಟು ಏರಿಕೆ ಕಂಡಿದೆ.