ಆರ್ಥಿಕ ಬಿಕ್ಕಟ್ಟು: ಮೇ 28 ರವರೆಗೆ ಎಲ್ಲಾ ಗೋ ಫಸ್ಟ್ ವಿಮಾನ ರದ್ದು
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಗೋ ಫಸ್ಟ್ ವಿಮಾನಯಾನ ಸಂಸ್ಥೆ ಮೇ 28 ರವರೆಗೆ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಈ ಹಿಂದೆ ಮೇ. 26 ರವರೆಗೆ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತ್ತು.
Published: 26th May 2023 04:00 PM | Last Updated: 29th May 2023 01:45 PM | A+A A-

ಗೋ ಫಸ್ಚ್ ವಿಮಾನ
ನವದೆಹಲಿ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಗೋ ಫಸ್ಟ್ ವಿಮಾನಯಾನ ಸಂಸ್ಥೆ ಮೇ 28 ರವರೆಗೆ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಈ ಹಿಂದೆ ಮೇ. 26 ರವರೆಗೆ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತ್ತು.
ಈ ಕುರಿತು ಶುಕ್ರವಾರ ಟ್ವೀಟರ್ ನಲ್ಲಿ ಫೋಸ್ಟ್ ಮಾಡಿರುವ ಏರ್‌ಲೈನ್ಸ್, ಕಾರ್ಯಾಚರಣೆಯ ಕಾರಣಗಳಿಂದಾಗಿ ಮೇ 28 ರವರೆಗೆ ನಿಗದಿಯಾಗಿದ್ದ ಎಲ್ಲಾ ಗೋ ಫಸ್ಟ್ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ. ವಿಮಾನ ರದ್ದತಿಯಿಂದ ಉಂಟಾದ ಅನುಕೂಲಕ್ಕಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಲಾಗಿದೆ.
ಶೀಘ್ರದಲ್ಲೇ ಮೂಲ ಪಾವತಿ ವಿಧಾನದಂತೆ ಸಂಪೂರ್ಣ ಮರುಪಾವತಿ ಮಾಡಲಾಗುವುದು, ಕಂಪನಿಯು ತಕ್ಷಣದ ಪರಿಹಾರ ಮತ್ತು ಕಾರ್ಯಾಚರಣೆಗಳ ಪುನರುಜ್ಜೀವನಕ್ಕಾಗಿ ಅರ್ಜಿಯನ್ನು ಸಲ್ಲಿಸಿದೆ. ಶೀಘ್ರದಲ್ಲೇ ಬುಕಿಂಗ್ ಪುನರಾರಂಭಿಸಲು ಸಾಧ್ಯವಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
Due to operational reasons, Go First flights until 28th May 2023 are cancelled. We apologise for the inconvenience caused and request customers to visit https://t.co/zqHcMarRJc for more info. For any queries or concerns, please feel free to contact us. pic.twitter.com/phFgt4uDZd
— GO FIRST (@GoFirstairways) May 26, 2023
ವಿಮಾನಗಳ ಕಾರ್ಯಾಚರಣೆ ಪುನರಾರಂಭಿಸಲು ಯಾವುದೇ ನಿರ್ದಿಷ್ಟ ವೇಳಾಪಟ್ಟಿ ಹೊಂದಿಲ್ಲ ಎಂದು ಮಂಗಳವಾರ ಡಿಜಿಸಿಎ ನೀಡಿದ್ದ ಶೋಕಾಸ್ ನೋಟಿಸ್ ಗೆ ವಿಮಾನಯಾನ ಸಂಸ್ಥೆ ಉತ್ತರಿಸಿತ್ತು. ಗೋ ಫಸ್ಟ್ ಶೀಘ್ರದಲ್ಲೇ ಕಾರ್ಯಾಚರಣೆ ಪುನರಾರಂಭಿಸುವ ಇಂಗಿತವನ್ನು ವ್ಯಕ್ತಪಡಿಸಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.