ನಯಾರಾ ಪೆಟ್ರೋಲ್ ಪಂಪ್ ಗಳಲ್ಲಿ ರಿಯಾಯಿತಿ ದರದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ!
ಉಳಿದ ಪೆಟ್ರೋಲ್ ಪಂಪ್ ಗಳಿಗೆ ಹೋಲಿಕೆ ಮಾಡಿದರೆ ನಯಾರಾ ಪೆಟ್ರೋಲ್ ಪಂಪ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ 1 ರೂಪಾಯಿ ಕಡಿಮೆ ಇರುವುದು ವಿಶೇಷವಾಗಿದೆ.
Published: 30th May 2023 06:35 PM | Last Updated: 30th May 2023 06:43 PM | A+A A-

ನಯಾರ ಎನರ್ಜಿ
ರಿಲಾಯನ್ಸ್ ಸಂಸ್ಥೆ ಹಾಗೂ ಅದರ ಬ್ರಿಟನ್ ಪಾಲುದಾರ ಸಂಸ್ಥೆ ಬಿಪಿ ಪಿಎಲ್ ಸಿ ಪೆಟ್ರೋಲ್, ಡೀಸೆಲ್ ಮಾರಾಟ ಕ್ಷೇತ್ರಕ್ಕೆ ಪ್ರವೇಶಿಸಿದ ಬೆನ್ನಲ್ಲೆ ಈಗ ಮತ್ತೊಂದು ಖಾಸಗಿ ಸಂಸ್ಥೆಯಾಗಿರುವ ನಯಾರಾ ಎನರ್ಜಿ ಪೆಟ್ರೋಲ್, ಡೀಸೆಲ್ ಮಾರಾಟದ ಔಟ್ ಲೆಟ್ ಗಳನ್ನು ವಿಸ್ತರಿಸುತ್ತಿದೆ.
ಉಳಿದ ಪೆಟ್ರೋಲ್ ಪಂಪ್ ಗಳಿಗೆ ಹೋಲಿಕೆ ಮಾಡಿದರೆ ನಯಾರಾ ಪೆಟ್ರೋಲ್ ಪಂಪ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ 1 ರೂಪಾಯಿ ಕಡಿಮೆ ಇರುವುದು ವಿಶೇಷವಾಗಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಅಂತರರಾಷ್ಟ್ರೀಯ ದರಗಳಲ್ಲಿ ಇಳಿಕೆಯ ಹೊರತಾಗಿಯೂ ಬೆಲೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿದರೆ, ಇಂಧನ ಮಾರಾಟ ಕ್ಷೇತ್ರದಲ್ಲಿರುವ ಖಾಸಗಿ ಸಂಸ್ಥೆಗಳು ಗ್ರಾಹಕರಿಗೆ ಬೆಲೆ ಇಳಿಕೆಯ ಲಾಭವನ್ನು ರವಾನಿಸಲು ಪ್ರಾರಂಭಿಸಿವೆ.
"ದೇಶೀಯ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು ಮತ್ತು ಸ್ಥಳೀಯ ಗ್ರಾಹಕರಿಗೆ ಉತ್ತಮವಾಗಿ ಪೂರೈಸಲು, ನಾವು ಜೂನ್ 2023 ರ ಅಂತ್ಯದವರೆಗೆ ನಮ್ಮ ಮಳಿಗೆಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಗೆ 1 ರೂಪಾಯಿ ರಿಯಾಯಿತಿಯನ್ನು ಪರಿಚಯಿಸಿದ್ದೇವೆ" ಎಂದು ನಯಾರಾ ಎನರ್ಜಿಯ ವಕ್ತಾರರು ತಿಳಿಸಿದ್ದಾರೆ.
ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ 10 ರಾಜ್ಯಗಳಲ್ಲಿ ನಯಾರಾ ಎನರ್ಜಿ ರಿಯಾಯಿತಿ ದರದಲ್ಲಿ ಪೆಟ್ರೋಲ್ ಮಾರಾಟ ಮಾಡುತ್ತಿದೆ. ಭಾರತದ 86,925 ಪೆಟ್ರೋಲ್ ಪಂಪ್ ಗಳ ಪೈಕಿ ನಯಾರಾ ಎನರ್ಜಿ ಶೇ.7 ರಷ್ಟನ್ನು ಹೊಂದಿದೆ.
ಈ ತಿಂಗಳ ಆರಂಭದಲ್ಲಿ, ರಿಲಯನ್ಸ್ ಮತ್ತು ಬಿಪಿಯ ಇಂಧನ ಜಂಟಿ ಉದ್ಯಮವಾದ ಜಿಯೋ-ಬಿಪಿ, ಸರ್ಕಾರಿ ಸ್ವಾಮ್ಯದ ಕಂಪನಿಗಳು ಮಾರಾಟ ಮಾಡುವ ಸಾಮಾನ್ಯ ದರ್ಜೆಯ ಡೀಸೆಲ್ ಗಿಂತ ಉತ್ತಮ ದರ್ಜೆಯ ಡೀಸೆಲ್ ನ್ನು ಪ್ರತಿ ಲೀಟರ್‌ಗೆ 1 ರೂಪಾಯಿಗೆ ಅಗ್ಗದ ದರಲ್ಲಿ ಮಾರಾಟ ಮಾಡಲು ಪ್ರಾರಂಭಿಸಿತ್ತು.