ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ, ಗೋವಾಕ್ಕೆ ಸ್ಟಾರ್ ಏರ್ ವಿಮಾನ ಸೇವೆ ಆರಂಭ
ಮಂಗಳವಾರದಿಂದ ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ಮೂರು ಹೊಸ ದೈನಂದಿನ ವಿಮಾನಗಳ ಸಂಚಾರವನ್ನು ಪ್ರಾರಂಭಿಸಲಿದೆ.
Published: 20th November 2023 08:08 AM | Last Updated: 20th November 2023 08:00 PM | A+A A-

ಸ್ಟಾರ್ ಏರ್ ವಿಮಾನ
ಶಿವಮೊಗ್ಗ: ಮಂಗಳವಾರದಿಂದ ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ಮೂರು ಹೊಸ ದೈನಂದಿನ ವಿಮಾನಗಳ ಸಂಚಾರವನ್ನು ಪ್ರಾರಂಭಿಸಲಿದೆ.
ವಿಮಾನಯಾನ ಸಂಸ್ಥೆಯು ತಮ್ಮ ಹೊಸ Embraer E175 ವಿಮಾನವನ್ನು ಬಳಸಿಕೊಂಡು ಈ ಬಹು ನಿರೀಕ್ಷಿತ ಮಾರ್ಗಗಳಲ್ಲಿ ಸಂಚಾರ ಪ್ರಾರಂಭಿಸಲಿದೆ.
ಹೈದರಾಬಾದ್‌ನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಅನ್ವೇಷಿಸುವ ಪ್ರವಾಸಿಗರಿಗೆ ಮತ್ತು ಬ್ಯುಸಿನೆಸ್ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶಿವಮೊಗ್ಗ ಮತ್ತು ಹೈದರಾಬಾದ್ ನಡುವೆ ತಡೆರಹಿತ ದೈನಂದಿನ ವಿಮಾನಗಳ ಸೇವೆ ಲಭ್ಯವಿರುತ್ತದೆ ಎಂದು ಸ್ಟಾರ್ ಏರ್ ಮೂಲಗಳು ತಿಳಿಸಿವೆ.
ದೈನಂದಿನ ವಿಮಾನಗಳು ಶಿವಮೊಗ್ಗದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಶ್ರೀ ವೆಂಕಟೇಶ್ವರ ದೇವಸ್ಥಾನ ಮತ್ತು ಇತರ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆನಂದಿಸಬಹುದು ಮತ್ತು Embraer E175 ನಲ್ಲಿನ ಸೌಕರ್ಯವನ್ನು ಅನುಭವಿಸಬಹುದು. ಗೋವಾದ ಕಡಲತೀರಗಳಿಗೆ ಭೇಟಿ ನೀಡುವವರಿಗೆ, ಸ್ಟಾರ್ ಏರ್ ದೈನಂದಿನ ವಿಮಾನಗಳ ಸಂಚಾರವನ್ನು ನೀಡಲಿದೆ. ಇದು ಗೋವಾದ ಕರಾವಳಿಗೆ ಸಂಪರ್ಕ ಒದಗಿಸುತ್ತದೆ ಎಂದು ಸ್ಟಾರ್ ಏರ್ ಹೇಳಿದೆ.
ಇದನ್ನೂ ಓದಿ: ಮಂಗಳೂರು-ಬೆಂಗಳೂರು ನಡುವೆ ಮತ್ತೆರಡು ವಿಮಾನಗಳ ಸಂಚಾರ ಆರಂಭ
Embraer E175 ತನ್ನ 'ಅಸಾಧಾರಣ ಸೌಕರ್ಯ ಮತ್ತು ಕಾರ್ಯಕ್ಷಮತೆಗೆ' ಹೆಸರುವಾಸಿಯಾಗಿದೆ. ಇದು ಈ ಹೊಸ ಮಾರ್ಗಗಳಿಗೆ ಸೂಕ್ತವಾದ ಆಯ್ಕೆಯಾಗಿದೆ ಎಂದು ಸ್ಟಾರ್ ಏರ್ ಹೇಳಿದೆ.
ಈ ವಿಮಾನವು 2-ವರ್ಗದ ಸಂರಚನೆಯನ್ನು 12 ಐಷಾರಾಮಿ ಬ್ಯುಸಿನೆಸ್ ಕ್ಲಾಸ್ ಆಸನಗಳು ಮತ್ತು 64 ಅತ್ಯುತ್ತಮ-ವರ್ಗದ ಎಕಾನಮಿ ಆಸನಗಳನ್ನು ಹೊಂದಿದೆ. ಪ್ರಯಾಣಿಕರು ವಿಶಾಲವಾದ ಆಸನಗಳು, ಪೂರ್ಣ ಊಟದ ಸೇವೆ, ಆದ್ಯತೆಯ ಚೆಕ್-ಇನ್ ಮತ್ತು ಬ್ಯಾಗೇಜ್ ನಿರ್ವಹಣೆ ಸೇರಿದಂತೆ ಒಟ್ಟಾರೆ ಉತ್ತಮ ಪ್ರಯಾಣದ ಅನುಭವವನ್ನು ಎದುರುನೋಡಬಹುದು.
ಇದೇ ವೇಳೆ ಸಂಸದ ಬಿವೈ ರಾಘವೇಂದ್ರ ಮಾತನಾಡಿ, ಮಧ್ಯ ಕರ್ನಾಟಕದ ಜನರು ಕಡ್ಡಾಯವಾಗಿ ವಿಮಾನ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.