ಕೋಟಕ್ ಮಹೀಂದ್ರಾ ಬ್ಯಾಂಕ್ ಸಿಇಒ ಹುದ್ದೆಗೆ ಉದಯ್ ಕೋಟಕ್ ರಾಜೀನಾಮೆ
ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಉದಯ್ ಕೋಟಕ್ ರಾಜೀನಾಮೆ ನೀಡಿದ್ದಾರೆ ಎಂದು ಬ್ಯಾಂಕ್ ಶನಿವಾರ ತಿಳಿಸಿದೆ.
Published: 02nd September 2023 04:58 PM | Last Updated: 02nd September 2023 05:01 PM | A+A A-

ಉದಯ್ ಕೋಟಕ್
ಮುಂಬೈ: ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಉದಯ್ ಕೋಟಕ್ ರಾಜೀನಾಮೆ ನೀಡಿದ್ದಾರೆ ಎಂದು ಬ್ಯಾಂಕ್ ಶನಿವಾರ ತಿಳಿಸಿದೆ. ಜಂಟಿ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಗುಪ್ತಾ ಅವರು ಡಿಸೆಂಬರ್ 31 ರವರೆಗೆ ಮುಖ್ಯ ಕಾರ್ಯನಿರ್ವಾಹಕರಾಗಿರಲಿದ್ದಾರೆ ಎಂದು ಬ್ಯಾಂಕ್ ಷೇರು ವಿನಿಮಯ ಫೈಲಿಂಗ್‌ನಲ್ಲಿ ಹೇಳಿದೆ.
ಉದಯ್ ಕೋಟಕ್ ಅವರು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸ್ಥಾನದಿಂದ ಕೆಳಗಿಳಿದಿದ್ದು, ಇಂದು ನಡೆದ ಬ್ಯಾಂಕ್ ಮಂಡಳಿಯ ಸಭೆಯಲ್ಲಿ ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ಅವರ ರಾಜೀನಾಮೆಯನ್ನು ಪರಿಗಣಿಸಿದ್ದು, ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ ಎಂದು ಮಾಹಿತಿ ನೀಡಿದೆ.
ಕೋಟಕ್ ರಾಜೀನಾಮೆಗೆ ಯಾವುದೇ ಕಾರಣ ತಿಳಿಸಿಲ್ಲ. ಮಧ್ಯಂತರ ವ್ಯವಸ್ಥೆಯಾಗಿ ಗುಪ್ತಾ ಅವರು ಆರ್‌ಬಿಐ ಅನುಮೋದನೆಗೆ ಒಳಪಟ್ಟು ಡಿಸೆಂಬರ್ 31, 2023 ರವರೆಗೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎನ್ನಲಾಗಿದೆ.