ಭಾರತದ ವಿದೇಶಿ ವಿನಿಮಯ ಮೀಸಲು 4.9 ಬಿಲಿಯನ್ ಡಾಲರ್ ನಷ್ಟು ಕುಸಿತ
ಭಾರತದ ವಿದೇಶಿ ವಿನಿಮಯ ಮೀಸಲು ಸೆ.08 ರಂದು ಮುಕ್ತಾಯಗೊಂಡ ವಾರದಲ್ಲಿ 593.904 ಬಿಲಿಯನ್ ಡಾಲರ್ ನಿಂದ 4.992 ಬಿಲಿಯನ್ ಡಾಲರ್ ಗಳಿಗೆ ಇಳಿಕೆಯಾಗಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.
Published: 16th September 2023 11:57 AM | Last Updated: 16th September 2023 02:06 PM | A+A A-

ವಿದೇಶಿ ವಿನಿಮಯ ಮೀಸಲು
ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ಸೆ.08 ರಂದು ಮುಕ್ತಾಯಗೊಂಡ ವಾರದಲ್ಲಿ 4.992 ಬಿಲಿಯನ್ ಡಾಲರ್ ಗಳಷ್ಟು ಕುಸಿತ ಕಂಡಿದ್ದು 593.904 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.
ಕಳೆದ ವಾರದಲ್ಲಿ ಮೀಸಲು 4.04 ಬಿಲಿಯನ್ ಡಾಲರ್ ನಿಂದ 598.9 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿತ್ತು. ಅಕ್ಟೋಬರ್ 2021 ರಲ್ಲಿ ವಿದೇಶಿ ವಿನಿಮಯ ಮೀಸಲು ಗರಿಷ್ಠ ಅಂದರೆ 645 ಬಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು.
ಕಳೆದ ವರ್ಷದಿಂದ ಪ್ರಮುಖವಾಗಿ ಜಾಗತಿಕ ಬೆಳವಣಿಗೆಗಳಿಂದ ಉಂಟಾದ ಒತ್ತಡಗಳ ನಡುವೆ ರೂಪಾಯಿಯನ್ನು ರಕ್ಷಿಸಲು ಕೇಂದ್ರೀಯ ಬ್ಯಾಂಕ್ ಮೀಸಲುಗಳನ್ನು ಬಳಸಿದ್ದರಿಂದ ಮೀಸಲು ಕುಸಿತ ಕಂಡಿದೆ.
ಇದನ್ನೂ ಓದಿ: ವಿದೇಶಿ ವಿನಿಮಯ 4.03 ಬಿಲಿಯನ್ ಡಾಲರ್ ನಿಂದ 598.89 ಬಿಲಿಯನ್ ಡಾಲರ್ ಗೆ ಏರಿಕೆ
ಚಿನ್ನದ ಸಂಗ್ರಹವು 554 ಮಿಲಿಯನ್ ಡಾಲರ್‌ನಿಂದ 44.38 ಬಿಲಿಯನ್ ಡಾಲರ್‌ಗೆ ಇಳಿದಿದೆ ಎಂದು ಆರ್‌ಬಿಐ ತಿಳಿಸಿದೆ. ವಿಶೇಷ ಡ್ರಾಯಿಂಗ್ ಹಕ್ಕುಗಳು $134 ಮಿಲಿಯನ್‌ನಿಂದ $18.06 ಶತಕೋಟಿಗೆ ಇಳಿದಿದೆ ಎಂದು ಅಪೆಕ್ಸ್ ಬ್ಯಾಂಕ್ ತಿಳಿಸಿದೆ.
ವರದಿಯ ವಾರದಲ್ಲಿ ಐಎಂಎಫ್‌ನೊಂದಿಗಿನ ದೇಶದ ಮೀಸಲು ಸ್ಥಾನವು $ 39 ಮಿಲಿಯನ್‌ನಿಂದ $ 5.03 ಶತಕೋಟಿಗೆ ಇಳಿದಿದೆ ಎಂದು ಅಪೆಕ್ಸ್ ಬ್ಯಾಂಕ್ ಡೇಟಾ ಮೂಲಕ ತಿಳಿದುಬಂದಿದೆ.