ಭಾರತ್ ಬಂದ್ ನಂತರವೂ ಗ್ರಾಹಕರಿಗೆ ಶಾಕ್; ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಎಷ್ಟು ಏರಿಕೆ ಆಗಿದೆ ಗೊತ್ತ!

Published: 11 Sep 2018 08:25 AM IST | Updated: 11 Sep 2018 08:27 AM IST
ಸಂಗ್ರಹ ಚಿತ್ರ
ನವದೆಹಲಿ: ತೈಲ ಬೆಲೆ ಏರಿಕೆ ಕಂಡಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿನ್ನೆ ಭಾರತ್ ಬಂದ್ ನಡೆಸಿದ್ದು ತೀವ್ರ ಪ್ರತಿಭಟನೆಯ ನಂತರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. 

ತೈಲ ಕಂಪನಿಗಳು ಸೋಮವಾರ ಪೆಟ್ರೋಲ್ ಪ್ರತಿ ಲೀಟರ್ ಗೆ 23 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 22 ಪೈಸೆ ಏರಿಕೆ ಮಾಡಿವೆ. 

ಸದ್ಯ ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 88.12 ರು. ಡೀಸೆಲ್ ಪ್ರತಿ ಲೀಟರ್ ಗೆ 77.32 ರುಪಾಯಿ ಇದೆ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 80.73 ರು. ಡೀಸೆಲ್ ಪ್ರತಿ ಲೀಟರ್ ಗೆ 72.83 ರುಪಾಯಿ ಇದೆ. 

ಕಾಂಗ್ರೆಸ್ ನಿನ್ನೆ ಭಾರತ್ ಬಂದ್ ಗೆ ಕರೆ ನೀಡಿದ್ದು ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದ್ದರು.
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ