ವಾಣಿಜ್ಯ ವಹಿವಾಟು: ಶೇ.3.69 ತಲುಪಿದ ಚಿಲ್ಲರೆ ಹಣದುಬ್ಬರ, 10 ತಿಂಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿಕೆ

Published: 12 Sep 2018 08:15 PM IST
ಸಾಂದರ್ಭಿಕ ಚಿತ್ರ
ನವದೆಹಲಿ: ಆಗಸ್ಟ್ ತಿಂಗಳಿನಲ್ಲಿ ದೇಡದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 3.69ಕ್ಕೆ ಕುಸಿದಿದ್ದು ಕಳೆದ ಹತ್ತು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ.

 ಮುಖ್ಯವಾಗಿ ಹಣ್ಣು ಮತ್ತು ತರಕಾರಿಗಳನ್ನು ಒಳಗೊಂಡಂತೆ ಅಡುಗೆ ಪದಾರ್ಥಗಳ ಬೆಲೆ ಕುಸಿತವಾಗಿದೆ.ಎಂದು ಅಧಿಕೃತ ಅಂಕಿ ಅಂಶಗಳು ಹೇಳಿದೆ.

ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು ಜುಲೈನಲ್ಲಿ 4.17 ರಷ್ಟು ಮತ್ತು ಆಗಸ್ಟ್ 2017 ರಲ್ಲಿ 3.28 ರಷ್ಟು ಇತ್ತು. 2017 ರ ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 3.58 ರಷ್ಟಿತ್ತು

ಅಲ್ಪಾವಧಿ ಹಣದುಬ್ಬರ ಆರ್ ಬಿಐ ಅಂದಾಜಿಸಿದ್ದ ಶೇ. 4ಕ್ಕಿಂತ ಕಡಿಮೆ ಇರಲಿದೆ ಎಂದು ಆರ್ಥಿಕ ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅಲ್ಪಾವಧಿಯಲ್ಲಿನ ಬಡ್ಡಿದರಗಳು ಏರಿಕೆ ಕಾಣಲಿದೆ ಎಂದು ಅವರೌ ಹೇಳಿದ್ದಾರೆ.
Posted by: RHN | Source: PTI

ಈ ವಿಭಾಗದ ಇತರ ಸುದ್ದಿ