ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ; ಕೇಂದ್ರದ ಬೊಕ್ಕಸಕ್ಕೆ ಆದಾಯದ ಮಹಾಪೂರ!

ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ವಸೂಲಾಗುತ್ತಿರುವ ಅಬಕಾರಿ ಸುಂಕ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಅಬಕಾರಿ ಸುಂಕದಿಂದಾಗಿ 40,೦೦೦ ಕೋಟಿ ರೂ ವಸೂಲಾಗಿದೆ.
ಪೆಟ್ರೋಲ್ ದರ ಏರಿಕೆ
ಪೆಟ್ರೋಲ್ ದರ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ವಸೂಲಾಗುತ್ತಿರುವ ಅಬಕಾರಿ ಸುಂಕ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಅಬಕಾರಿ ಸುಂಕದಿಂದಾಗಿ 40,೦೦೦ ಕೋಟಿ ರೂ ವಸೂಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಅಬಕಾರಿ ಸುಂಕದ ಗುರಿಯ ಶೇ 16 ರಷ್ಟು ಈ ಎರಡು ತಿಂಗಳಲ್ಲಿ  ವಸೂಲಿಯಾಗಿರುವುದು ವಿಶೇಷ. ಏಪ್ರಿಲ್ ತಿಂಗಳಲ್ಲಿ  ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ 10,560 ಕೋಟಿ ರೂಪಾಯಿ ಅಬಕಾರಿ ಸುಂಕ ಸಂಗ್ರಹವಾಗಿದ್ದು,  ಮೇ ತಿಂಗಳಲ್ಲಿ 29,396ಕೋಟಿ ರೂ. ಸಂಗ್ರಹವಾಗಿದೆ ಈ ಎರಡು ತಿಂಗಳಲ್ಲಿ 40,000ಕೋಟಿ ರೂ. ಸರ್ಕಾರದ ಖಜಾನೆ ತಲುಪಿದೆ ಎಂದು ಮೂಲಗಳು ಹೇಳಿವೆ. 

ಮೇ 5 ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 10 ರೂ. ಡೀಸೆಲ್ ಮೇಲೆ 13ರೂ. ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿತು. ಅದಕ್ಕೂ ಮುನ್ನ ಲೀಟರ್ ಪೆಟ್ರೋಲ್ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ  22.98 ರೂ.ಆದಾಯ ಬರುತ್ತಿತ್ತು... ಮೇ 5 ನಂತರ ಅಬಕಾರಿ ಸುಂಕ ಹೆಚ್ಚಳದಿಂದ ಲೀಟರ್, ಪೆಟ್ರೋಲ್ ಮಾರಾಟದಿಂದ 32.98ರೂ.ಗೆ ಏರಿದೆ. ಅದೇರೀತಿ ಮೊದಲು ಡೀಸೆಲ್ ಮೇಲಿನ ಅಬಕಾರಿ ಸುಂಕ ಏರಿಕೆಯಿಂದ ಸರ್ಕಾರಕ್ಕೆ ಆದಾಯ ಹೆಚ್ಚಳವಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com