ರಂಗಭೂಮಿ ಆಸಕ್ತರಿಗೆ ಭಾರತೀಯ ವಿದ್ಯಾಭವನ-ವಿ ಮೂವ್ ಥಿಯೇಟರ್ ಸಹಯೋಗದಲ್ಲಿ ನವರಸ ಡಿಪ್ಲೋಮ ಕೋರ್ಸ್

ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಆಸಕ್ತಿಯುಳ್ಳವರಿಗೆ ವೇದಿಕೆಯನ್ನು ಒದಗಿಸುವ ದೃಷ್ಟಿಯಿಂದ ಅಭಿನಯ ಡಿಪ್ಲೋಮ ಕೋರ್ಸ್ ಪ್ರಾರಂಭಿಸಲಾಗಿದೆ. ಬೆಂಗಳೂರಿನ ಭಾರತೀಯ ವಿದ್ಯಾಭವನ- ವಿ ಮೂವ್ ಥಿಯೇಟರ್ ಸಹಯೋಗದಲ್ಲಿ ಈ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಲಾಗುತ್ತಿದೆ.
ರಂಗಭೂಮಿ ಆಸಕ್ತರಿಗೆ ಭಾರತೀಯ ವಿದ್ಯಾಭವನ-ವಿ ಮೂವ್ ಥಿಯೇಟರ್ ಸಹಯೋಗದಲ್ಲಿ ನವರಸ ಡಿಪ್ಲೋಮ ಕೋರ್ಸ್
ರಂಗಭೂಮಿ ಆಸಕ್ತರಿಗೆ ಭಾರತೀಯ ವಿದ್ಯಾಭವನ-ವಿ ಮೂವ್ ಥಿಯೇಟರ್ ಸಹಯೋಗದಲ್ಲಿ ನವರಸ ಡಿಪ್ಲೋಮ ಕೋರ್ಸ್

ಬೆಂಗಳೂರು: ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಆಸಕ್ತಿಯುಳ್ಳವರಿಗೆ ವೇದಿಕೆಯನ್ನು ಒದಗಿಸುವ ದೃಷ್ಟಿಯಿಂದ ಅಭಿನಯ ಡಿಪ್ಲೋಮ ಕೋರ್ಸ್ ಪ್ರಾರಂಭಿಸಲಾಗಿದೆ. ಬೆಂಗಳೂರಿನ ಭಾರತೀಯ ವಿದ್ಯಾಭವನ- ವಿ ಮೂವ್ ಥಿಯೇಟರ್ ಸಹಯೋಗದಲ್ಲಿ ಈ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಲಾಗುತ್ತಿದೆ.

ನಾಡಿನ ಹಲವೆಡೆ ಅಭಿನಯ ತರಬೇತಿ ಶಾಲೆಗಳಿದ್ದರು ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಹೀಗೆ ಮೂರು ಕ್ಷೇತ್ರದಲ್ಲಿ ಕೂಡ ತರಬೇತಿ ನೀಡುವ ಸಂಸ್ಥೆಗಳ ಸಂಖ್ಯೆ ತುಂಬಾ ಕಡಿಮೆ. ನವರಸ ಡಿಪ್ಲೋಮ ಕೋರ್ಸ್ ಒಂದು ಪರಿಪೂರ್ಣ ಕೋರ್ಸ್ ಆಗಿದ್ದು ಕೇವಲ ನಟನೆಯನ್ನು ಮಾತ್ರವಲ್ಲದೆ ಮೂರೂ ಕ್ಷೇತ್ರಕ್ಕೆ ಸಲ್ಲುವ ಕೌಶಲ್ಯವನ್ನು ಕಲ್ಪಿಸಲಿದ್ದು, ವಿದ್ಯಾರ್ಥಿಗಳಿಗೆ ದೇಹ ಚಲನೆ, ಭಾಷಣ, ಧ್ವನಿ ಮಾಡ್ಯುಲೇಷನ್, ಮೇಕಪ್, ಬೆಳಕು, ವಿನ್ಯಾಸ, ಬರವಣಿಗೆ ಮತ್ತು ನಿರ್ದೇಶನದ ತರಬೇತಿ ನೀಡಲಾಗುವುದು ಹಾಗೂ ವಿದ್ಯಾರ್ಥಿಗಳಿಗೆ ಹಲವು ಆಡಿಷನ್ಸ್‍ಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಕಲ್ಪಿಸಿ ಕೊಡಲಿದೆ.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವೃತ್ತಿಪರ ಕೋರ್ಸಗಳನ್ನು ಒದಗಿಸುವುದರಲ್ಲಿ ಮುಂಚೂಣಿಯಲಿರುವ ಭಾರತೀಯ ವಿದ್ಯಾಭವನ, ಬೆಂಗಳೂರು ಕೇಂದ್ರ ಹಾಗೂ ನಾಟಕರಂಗ ಎಲ್ಲರಿಗೂ ತಲುಪುವಂತೆ ಮಾಡುವ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯುಳ್ಳವರಿಗೆ ವೇದಿಕೆಯನ್ನು ಒದಗಿಸುವ ದೃಷ್ಟಿಯಿಂದ ಆರಂಭವಾದ ವಿ ಮೂವ್ ಥಿಯೇಟರ್, ಇವರ ಸಹಯೋಗದಲ್ಲಿ ಹೊಸ ಅಭಿನಯ ಡಿಪ್ಲೋಮ ಕೋರ್ಸ್ ಪ್ರಾರಂಭಿಸುತ್ತಿದೆ.

ರಂಗಭೂಮಿಯಲ್ಲಿ 16 ವರ್ಷಗಳಿಂದ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ವಿ ಮೂವ್ ತಂಡದ ತರಬೇತುದಾರರು ಈ ಕೋರ್ಸ್‍ನ ಸಂಪೂರ್ಣ ಹೊಣೆ ಹೊತ್ತಿದ್ದು, 10 ವರ್ಷಗಳಿಗಿಂತ ಹೆಚ್ಚು ಕಾಲ ನಾಟಕ ಮತ್ತು ನಟನಾ ಕಾರ್ಯಾಗಾರಗಳನ್ನು ನಡೆಸುವಲ್ಲಿ ಅನುಭವ ಹೊಂದಿದ್ದಾರೆ.

ನವರಸ ಡಿಪ್ಲೋಮ ಕೋರ್ಸ್‍ನ ತರಗತಿಗಳು ಸೆಪ್ಟೆಂಬರ್ ತಿಂಗಳಿಂದ ಆರಂಭವಾಗಲಿದ್ದು, ಶನಿವಾರ ಹಾಗೂ ಭಾನುವಾರ ತರಗತಿಗಳನ್ನು ನಡೆಸಲಾಗುತ್ತದೆ. ಪ್ರಾರಂಭದಲ್ಲಿ ತರಗತಿಗಳು “Online" ಮೂಲಕ ನಡೆಸಲಾಗುವುದು. ಕೋವಿಡ್-19ರ ಪರಿಸ್ಥಿತಿಯನ್ನು ಪರಿಶೀಲಿಸಿ ತರಗತಿಗಳನ್ನು ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆಯಲ್ಲಿ ನಡೆಸಲಾಗುವುದು.

ನಾಟಕರಂಗ ಎಲ್ಲರಿಗೂ ತಲುಪುವಂತೆ ಮಾಡುವ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯುಳ್ಳವರಿಗೆ ವೇದಿಕೆಯನ್ನು ಒದಗಿಸುವ ದೃಷ್ಟಿಯಿಂದ ವಿ ಮೂವ್ ತಂಡ ಕಾರ್ಯನಿರ್ವಹಿಸುತ್ತಿದೆ. 

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿವರಗಳನ್ನು  ಸಂಪರ್ಕಿಸಬಹುದಾಗಿದೆ. 080 – 22267303 / 22201959, 9980055864, 7259841293
ಇ-ಮೇಲ್: hbcollege18@yahoo.co.in | bhavanblrhns50@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com