'ಗುರು ಶಿಷ್ಯರು' ನಿರ್ದೇಶಕ ಜಡೇಶಾ ಕೆ ಹಂಪಿ ಮುಂದಿನ ಸಿನಿಮಾಗೆ ವಿಜಯ್ ನಾಯಕ?
ಗುರು-ಶಿಷ್ಯರು ಸಿನಿಮಾ ಮೂಲಕ ಸಾಕಷ್ಟು ಪ್ರೀತಿ ಅಭಿಮಾನ ಗಳಿಸಿದ ನಿರ್ದೇಶಕರ ಜಡೇಶಾ ಕೆ ಹಂಪಿ ತಮ್ಮ ಮುಂದಿನ ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
Published: 05th December 2022 12:37 PM | Last Updated: 05th December 2022 01:16 PM | A+A A-

ಜಡೇಶಾ ಮತ್ತು ವಿಜಯ್ ಕುಮಾರ್
ಗುರು-ಶಿಷ್ಯರು ಸಿನಿಮಾ ಮೂಲಕ ಸಾಕಷ್ಟು ಪ್ರೀತಿ ಅಭಿಮಾನ ಗಳಿಸಿದ ನಿರ್ದೇಶಕರ ಜಡೇಶಾ ಕೆ ಹಂಪಿ ತಮ್ಮ ಮುಂದಿನ ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ದುನಿಯಾ ವಿಜಯ್ ಗಾಗಿ ಸಿನಿಮಾ ಮಾಡಲು ಜಡೇಶಾ ಉತ್ಸುಕರಾಗಿದ್ದಾರೆ, ನಟ ವಿಜಯ್ ಜೊತೆ ಈಗಗಲೆ ಮಾತುಕತೆ ನಜೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯ್ ಅವರು ತಮ್ಮ ಮೊದಲ ತೆಲುಗು ಪ್ರಾಜೆಕ್ಟ್ ವೀರ ಸಿಂಹ ರೆಡ್ಡಿಯ ಚಿತ್ರೀಕರಣವನ್ನು ಪೂರ್ಣಗೊಳಿಸಲು ಹೈದರಾಬಾದ್‌ನಲ್ಲಿ ಒಂದು ತಿಂಗಳ ಕಾಲ ತಾತ್ಕಾಲಿಕವಾಗಿ ಕ್ಯಾಂಪ್ ಮಾಡಿದ್ದಾರೆ, ಇದರಲ್ಲಿ ಅವರು ನಂದಮೂರಿ ಬಾಲಕೃಷ್ಣ ಜೊತೆ ಖಳನಾಯಕನಾಗಿ ನಟಿಸಿದ್ದಾರೆ.
ಗೋಪಿಚಂದ್ ಮಲಿನೇನಿ ನಿರ್ದೇಶನದ ಬಹುತೇಕ ಭಾಗಗಳನ್ನು ಮುಗಿಸಿರುವ ವಿಜಯ್ ಅವರು ಈ ವಾರ ಬೆಂಗಳೂರಿಗೆ ಮರಳಲಿದ್ದಾರೆ. ಅವರು ಹಿಂದಿರುಗಿದ ನಂತರ ಜಡೇಶಾ ಅವರೊಂದಿಗೆ ಮುಂದಿನ ಸುತ್ತಿನ ಚರ್ಚೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ವಿಜಯ್ ಕುಮಾರ್ ಅವರ ನಿರ್ದೇಶನದ, ಭೀಮಾ, ಸದ್ಯ ನಿರ್ಮಾಣ ಹಂತದಲ್ಲಿದ್ದು, ನಿರ್ಮಾಪಕರು ಶೀಘ್ರದಲ್ಲೇ ಚಿತ್ರೀಕರಣ ಪುನರಾರಂಭಿಸಲಿದ್ದಾರೆ. ಚರಣ್ ರಾಜ್ ಅವರ ಸಂಗೀತ, ಶಿವಸೇನಾ ಅವರ ಛಾಯಾಗ್ರಹಣ ಮತ್ತು ಮಾಸ್ತಿ ಅವರ ಸಂಭಾಷಣೆಯೊಂದಿಗೆ, ಚಿತ್ರಕ್ಕೆ ಜಗದೀಶ್ ಗೌಡ ಮತ್ತು ಕೃಷ್ಣ ಸಾರ್ಥಕ್ ಬೆಂಬಲ ನೀಡಲಿದ್ದಾರೆ.