ಶೀತ ಹವಾಮಾನ ಮತ್ತು ಮಳೆಯಿಂದಾಗಿ ಅಮೆರಿಕಾದಲ್ಲಿ ಶೂಟಿಂಗ್ ಸವಾಲಿನದ್ದಾಗಿತ್ತು: ನಾಗತಿಹಳ್ಳಿ ಚಂದ್ರಶೇಖರ್

ಅಮೇರಿಕಾ ಅಮೇರಿಕಾ ಎಂಬ ಕ್ಲಾಸಿಕ್ ಸಿನಿಮಾ ನೀಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಅಮರ ಮಧುರ ಪ್ರೇಮ ಚಿತ್ರದ ಶೂಟಿಂಗ್ ಗಾಗಿ ಯುಎಸ್‌ಎಗೆ ತೆರಳಿದ್ದಾರೆ.
ಸಿನಿಮಾ ಶೂಟಿಂಗ್ ನಲ್ಲಿ ಚಿತ್ರತಂಡ
ಸಿನಿಮಾ ಶೂಟಿಂಗ್ ನಲ್ಲಿ ಚಿತ್ರತಂಡ

ಅಮೇರಿಕಾ ಅಮೇರಿಕಾ ಎಂಬ ಕ್ಲಾಸಿಕ್ ಸಿನಿಮಾ ನೀಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಅಮರ ಮಧುರ ಪ್ರೇಮ ಚಿತ್ರದ ಶೂಟಿಂಗ್ ಗಾಗಿ ಯುಎಸ್‌ಎಗೆ ತೆರಳಿದ್ದಾರೆ.

ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್, ಪೃಥ್ವಿ ಅಂಬಾರ್ ಮತ್ತು ನಿರೂಪ್ ಭಂಡಾರಿ  ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಅಮೆರಿಕದ ಹೃದಯಭಾಗದಲ್ಲಿ  ಪ್ರಮುಖ ಶೂಟಿಂಗ್ ಮುಗಿಸಿರುವ ನಾಗತಿಹಳ್ಳಿ ಅವರು ನಮ್ಮೊಂದಿಗೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸಿಯಾಟಲ್‌ನಿಂದ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಿರ್ದೇಶಕರು, ಶೀತ ಹವಾಮಾನ ಮತ್ತು ಮಳೆಯಿಂದಾಗಿ ಶೂಟಿಂಗ್ ಪ್ರಕ್ರಿಯೆಯು ಸಾಹಸಮಯ ಮತ್ತು ಸವಾಲಿನದ್ದಾಗಿದೆ ಎಂದಿದ್ದಾರೆ. ಆದರೆ ಚಿತ್ರೀಕರಣದ ವೇಳೆ ಕನ್ನಡಿಗರಿಂದ ಸಿಕ್ಕ ಬೆಂಬಲದಿಂದ ಥ್ರಿಲ್ ಆಗಿದ್ದಾರೆ.

ಸಹ್ಯಾದ್ರಿ ಕನ್ನಡ ಸಂಘದ ಭಾಗವಾಗಿರುವ ಮನು ಗರೂರ್ ಮತ್ತು ನಾಗೇಂದ್ರ ಮತ್ತು ಅವರ ಸ್ನೇಹಿತರು ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಬೆಂಬಲದಿಂದಾಗಿ ಶೂಟಿಂಗ್ ಸುಗಮವಾಗಿ ನಡೆಯಿತು. ಅವರು ನಮ್ಮ ಸಂಚಾರದ ವ್ಯವಸ್ಥೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅವರ ಆತಿಥ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಛಾಯಾಗ್ರಾಹಕ ಎಸ್‌ಕೆ ರಾವ್ ಅವರು ಅತ್ಯುತ್ತಮ ದೃಶ್ಯಗಳನ್ನು ಸೆರೆಹಿಡಿದಿದ್ದಕ್ಕಾಗಿ ನಿರ್ದೇಶಕರು ಶ್ಲಾಘಿಸಿದ್ದಾರೆ, ಕಲಾ ನಿರ್ದೇಶಕ ಶಿವು, ಸಹಾಯಕ ನಿರ್ದೇಶಕ ಸಮೀರ್ ಮತ್ತು ಅವರ ಪತ್ನಿ ಪುಷ್ಪಾ ಸೇರಿದಂತೆ ಟೆಂಟ್ ಸಿನಿಮಾ ತಂಡದ ಕೊಡುಗೆಯನ್ನು ಆಭಾರಿಯಗಿರುವುದಾಗಿ ಹೇಳಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಶೇ. 80 ರಷ್ಟು ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು.  ಕೆಲವು ಪ್ಯಾಚ್ ವರ್ಕ್ ಗಳಿದ್ದು ಅದನ್ನೂ ಭಾರತದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.

ಅಮರ ಮಧುರ ಪ್ರೇಮ, ಇದು ವರ್ಕಿಂಗ್ ಟೈಟಲ್ ಆಗಿದ್ದು ಇನ್ನೂ ಅಂತಿಮಗೊಂಡಿಲ್ಲ ಎಂದು  ನಾಗತಿಹಳ್ಳಿ ಸ್ಪಷ್ಟಪಡಿಸಿದ್ದಾರೆ. ಚಿತ್ರಕ್ಕೆ ಅಮೇರಿಕಾ ಅಮೇರಿಕಾ 2 ಎಂದು ಹೆಸರಿಸಬೇಕೆ ಎಂದು ನಾನು ಇನ್ನೂ ಯೋಚಿಸುತ್ತಿದ್ದೇನೆ, ನಂತರದ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com