ಮೋದಿ ಜೀವನಾಧಾರಿತ ಸಿನಿಮಾ: ಚಿತ್ರ ವೀಕ್ಷಿಸಿ ಅಭಿಪ್ರಾಯ ತಿಳಿಸಿ, ಚುನಾವಣಾ ಆಯೋಗಕ್ಕೆ 'ಸುಪ್ರೀಂ' ನಿರ್ದೇಶನ

ವಿವೇಕ್ ಒಬೆರಾಯ್ ಅಭಿನಯದ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ "ಪಿಎಂ ನರೇಂದ್ರ ಮೋದಿ" ಚಿತ್ರ ಬಿಡುಗಡೆಗೆ ನಿಷೇಧಿಸಿದ್ದ ಚುನಾವಣಾ ಆಯೋಗದ.....
ಪಿಎಂನರೇಂದ್ರ ಮೋದಿ
ಪಿಎಂನರೇಂದ್ರ ಮೋದಿ
ನವದೆಹಲಿ: ವಿವೇಕ್ ಒಬೆರಾಯ್ ಅಭಿನಯದ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ "ಪಿಎಂ ನರೇಂದ್ರ ಮೋದಿ" ಚಿತ್ರ ಬಿಡುಗಡೆಗೆ ನಿಷೇಧಿಸಿದ್ದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಚಿತ್ರತಂಡ ಸುಪ್ರೀಂ ಕೋರ್ಟ್ ನ ಕದ ತಟ್ಟಿತ್ತು. ಸೋಮವಾರ ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ "ಪಿಎಂ ನರೇಂದ್ರ ಮೋದಿ" ಚಿತ್ರವನ್ನು ಚುನಾವಣಾ  ಆಯೋಗ ವೀಕ್ಷಣೆ ಮಾಡಬೇಕೆಂದೂ ಆ ನಂತರ ನಿಷೇಧ ಕುರಿತು ಹೇಳಬೇಕೆಂದು ಆದೇಶಿಸಿದೆ.
ಚುನಾವಣಾ ಆಯೋಗ "ಪಿಎಂ ನರೇಂದ್ರ ಮೋದಿ" ಚಿತ್ರವನ್ನು ವೀಕ್ಷಿಸಬೇಕು, ಆಯೋಗವು ಚಿತ್ರ ವೀಕ್ಷಣೆ ಮಾಡಿದ ನಂತರ ಏಪ್ರಿಲ್ 22ಕ್ಕೆ ಮುನ್ನ ಮುಚ್ಚಿದ ಲಕೋಟೆಯಲ್ಲಿ ತನ್ನ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಪ್ರಜಾಪ್ರಭುತ್ವದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಮುಖ್ಯ, "ಪಿಎಂ ನರೇಂದ್ರ ಮೋದಿ" ಚಿತ್ರವನ್ನು "ರಾಜಕೀಯ ಪ್ರಚಾರ" ಎಂದು ನೋಡುವುದಕ್ಕಿಂತ "ಸ್ಪೂರ್ತಿದಾಯಕ ಕಥೆ" ಆಗಿ ನೋಡಬೇಕು ಎಂದು ನಿರ್ಮಾಪಕ ಸಂದೀಪ್ ಸಿಂಗ್ ನ್ಯಾಯಲಯದಲ್ಲಿ ಮನವಿ ಮಾಡಿದ್ದರು. "ಪ್ರತಿಯೊಬ್ಬ ನಾಗರಿಕನನಿಗೆ ನ್ಯಾಯಲ್ಕ್ಕಾಗಿ ಕೇಳುವ ಹಕ್ಕಿದೆ.ಹಾಗಾಗಿಯೇ ನಾನು ಸಹ ನ್ಯಾಯಾಲಯ ಆಗಮಿಸಿದ್ದೇನೆ. ನನಗೂ, ಇಡೀ ಚಿತ್ರತಂಡಕ್ಕೂ ಈ ಚಿತ್ರ ವಿಶೇಷವಾಗಿದೆ. ನಾವು ಈ ಚಿತ್ರವನ್ನು ಜಗತ್ತೇ ನೋಡಬೇಕೆಂದು ಬಯಸುತ್ತೇವೆ ಎಂದು ನಿರ್ಮಾಪಕರು ಹೇಳೀದ್ದರು.
ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಾಲಯ ಚುನವ್ಣಾ ಆಯೋಗ ಚಿತ್ರ ವೀಕ್ಷಣೆ ಮಾಡಿ ಅಭಿಪ್ರಾಯ ತಿಳಿಸುವಂತೆ ಕೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com