ಆಲಿಯಾ ಭಟ್ ಈ ಚುನಾವಣೇಲಿ ಮತ ಹಾಕಲ್ಲ ಏಕೆ ಗೊತ್ತೆ?

ಬಾಲಿವುಡ್ ಹಾಟ್ ಬೆಡಗಿ, ಆಲಿಯಾ ಭಟ್ ಈ ಬಾರಿ ಲೋಕಸಭೆ ಚುನಾವಣೆಗೆ ಮತ ಹಾಕಲ್ಲ! ಇದೇನಿದು?
ಆಲಿಯಾ ಭಟ್
ಆಲಿಯಾ ಭಟ್
ಮುಂಬೈ: ಬಾಲಿವುಡ್ ಹಾಟ್ ಬೆಡಗಿ, ಆಲಿಯಾ ಭಟ್ ಈ ಬಾರಿ ಲೋಕಸಭೆ ಚುನಾವಣೆಗೆ ಮತ ಹಾಕಲ್ಲ! ಇದೇನಿದು? ಎಲ್ಲಾ ನಟ ನಟಿಯರು, ಸೆಲೆಬ್ರಿಟಿಗಳು ಸಾರ್ವಜನಿಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸುತ್ತಾ ತಪ್ಪದೇ ಮತದಾನ ಮಾಡಿ ಎನ್ನುತ್ತಿದರೆ ಆಲಿಯಾ ಮಾತ್ರ ತಾನು ಮತ ಚಲಾಯಿಸಲ್ಲ ಎಂದಿದ್ದೇಕೆ? 
ನಾನು ಮತ ಚಲಾಯಿಸಲಾರೆ, ನನ್ನ ಬಳಿ ಭಾರತೀಯ ಪಾಸ್‌ಪೋರ್ಟ್ ಇಲ್ಲ ಹೀಗಾಗಿ ನನಗೆ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಟಿ ಆಲಿಯಾ ಭಟ್ ಹೇಳಿಕೊಂಡಿದ್ದಾರೆ. 
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವಾರು ಬಾಲಿವುಡ್ ನಟ ನಟಿಯರು, ಕ್ರೀಡಾಪಟುಗಲನ್ನು ಟ್ವಿಟ್ಟರ್ ಮೂಲಕ ಟ್ಯಾಗ್ ಮಾಡಿ ಜನರಿಗೆ ಮತದಾನ ಮಾಡಲು ಪ್ರೋತ್ಸಾಹಿಸುವಂತೆ ಕೋರಿದ್ದರು. ಇನ್ನು ಪ್ರಧಾನಿ ಮೋದಿಯವರ ಬೆಂಬಲಿಗರಲ್ಲಿ ನಟಿ ಆಲಿಯಾ ಸಹ ಒಬ್ಬರು. ಆದರೆ ಆಕೆಗೆ ಭಾರತೀಯ ಪೌರತ್ವವಿಲ್ಲದೆ ಹೋಗಿರುವ ಕಾರಣ ಆಕೆ ಮತದಾನ ಮಾಡಲು ಸಾಧ್ಯವಿಲ್ಲದಂತಾಗಿದೆ.
ಆದರೆ ಈ ವೇಳೆ ಆಲಿಯಾ ತಮ್ಮ ಟ್ವಿಟ್ಟರ್ ಕಾತೆ ಮೂಲಕ ಪ್ರತಿ ಭಾರತೀಯರೂ ಮತ ಚಲಾಯಿಸಿ, ತಪ್ಪದೆ ಮತ ಹಾಕಿ ಎಂದು ಸಂದೇಶ ಕೊಟ್ಟಿದ್ದಾರೆ. "ಒಂದು ಮತ ಆ ರಾಷ್ಟ್ರದ ಧ್ವನಿಯಾಗಿದೆ.ನಿಮ್ಮ ಧ್ವನಿಯನ್ನು ಬಳಸಿ ರಾಷ್ಟ್ರದ ನಾಯಕರ ಆಯ್ಕೆ ಮಾಡಿ," ಏಂದು ಆಕೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ವರುಣ್ ಧವನ್, ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿರುವ ಚಿತ್ರ ಕಳಂಕ್  ಬಿಡುಗಡೆಗೆ ಸಿದ್ದವಾಗಿದೆ.ಇತ್ತೀಚಿಗೆ ಕಳಂಕ್  ಚಿತ್ರತಂಡ ಖ್ಯಾತ ಆಂಗ್ಲ ನಿಯತಕಾಕಿಕೆಯೊಂದಕ್ಕೆ ಸಂದರ್ಶನ ಣೀಡಿದೆ. ಆವೇಳೆ ಆಲಿಯಾ ಸಹವರ್ತಿಗಳಾದ ವರುಣ್ ಧವನ್, ಸೋನಾಕ್ಷಿ ಸಿನ್ಹಾ ಮತ್ತು ಆದಿತ್ಯ ಅವರುಗಳಿಗೆ "ಈ ಚುನಾವಣೆ ನಿಮ್ಮ ಮೇಲೆ ಯಾವ ಪ್ರಭಾವ ಬೀರಿದೆ?" ಎಂದು ಕೇಳಿದಾಗ ಅವರೆಲ್ಲರೂ "ಮತ ಚಲಾವಣೆ ನಮ್ಮ ಹಕ್ಕು" ಎಂದು ಹೇಳಿದರೆ ಆಲಿಯಾ ಮಾತ್ರ "ನಾನು ಭಾರತೀಯ ಪೌರತ್ವ ಹೊಂದಿಲ್ಲ, ನಾನು ಮತದಾನ ಮಾಡುತ್ತಿಲ್ಲ" ಏಂದಿದ್ದಾರೆ.
ಅಲಿಯಾ ಮತ್ತು ಆಕೆಯ ತಾಯಿ ಸೋನಿ ರಝಾನ್  ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ್ದಾರೆ ಈ ಕಾರನಕ್ಕೆ  ಮತದಾನ ಮಾಡಲು ಅರ್ಹರಾಗಿಲ್ಲ ಎಂದು ಹೇಳಲಾಗಿದೆ.ಅವರು ಮತ ಚಲಾಯಿಸುವುದಕ್ಕಾ ಬ್ರಿಟೀಷ್ ಪೌರತ್ವ ತೊರೆದು ಭಾರತೀಯ ಪೌರತ್ವ ಪಡೆಯಬೇಕಿದೆ.'
ದೀಪಿಕಾದೂ ಅದೇ ಕಥೆ!
ಇನ್ನು ವಿಶೇಷವೆಂದರೆ ಆಲಿಯಾ ಭಟ್ ಮಾತ್ರವಲ್ಲದೆ ಖ್ಯಾತ ಬಾಲಿವುಡ್ ನಟಿ ಪ್ರಕಾಶ್ ಪಡುಕೋಣೆ ಪುತ್ರಿಯಾದ ದೀಪಿಕಾ ಪಡುಕೋಣೆಗೆ ಸಹ ಮತದಾನ ಮಾಡುವ ಹಕ್ಕಿಲ್ಲ. ದೀಪಿಕಾ ಡೆನ್ಮಾರ್ಕ್ ನಲ್ಲಿ ಹುಟ್ಟಿದ್ದು ಆಕೆ ಡೆನ್ಮಾರ್ಕ್ ಪೌರತ್ವ ಹೊಂದಿದವಳಾಗಿದ್ದಾರೆ, ಆಕೆಯ ಬಳಿಯೂ ಭಾರತೀಯ ಪಾಸ್‌ಪೋರ್ಟ್ ಇಲ್ಲ ಹಾಗಾಗಿ ಈ ಚುನಾವಣೆಯಲ್ಲಿ ದೀಪಿಕಾ ಮತ ಹಾಕಲು ಸಾಧ್ಯವಾಗದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com