ಮೋದಿ ಜೀವನಾಧಾರಿತ ಚಿತ್ರ ನಿಷೇಧ: ಚುನಾವಣಾ ಆಯೋಗದಿಂದ ಸುಪ್ರೀಂಗೆ ವಿವರವಾದ ವರದಿ ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ "ಪಿಎಂ ನರೇಂದ್ರ ಮೋದಿ" ಬಿಡುಗಡೆಗೆಗೆ ಚುನಾವಣಾ ಆಯೋಗ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ನಲ್ಲಿ ನಡೆದಿದೆ
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ "ಪಿಎಂ ನರೇಂದ್ರ ಮೋದಿ" ಬಿಡುಗಡೆಗೆಗೆ ಚುನಾವಣಾ ಆಯೋಗ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ನಲ್ಲಿ ನಡೆದಿದೆ. ಈ ವೇಳೆ ಸುಪ್ರೀಂ ಕೋರ್ಟ್ ಸೂಚನೆಯಂತೆ ಚುನಾವಣಾ ಆಯೋಗ ಚಿತ್ರದ ಕುರಿತಂತೆ ತನ್ನ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಪೀಠವು ಮೋದಿ ಜೀವನ ಆಧರಿಸಿದ್ದ ಚಿತ್ರದ ವಿಚಾರಣೆ ವೇಳೆ ಇಸಿ ಸಲ್ಲಿಸಿದ್ದ ವರದಿಯನ್ನು ಪಡೆದುಕೊಂಡಿದ್ದು ಈ ವರದಿಯ ಒಂದು ಪ್ರತಿಯನ್ನು ಚಿತ್ರ ನಿರ್ಮಾಪಕರಿಗೆ ಸಲ್ಲಿಸುವಂತೆ ಕೋರ್ಟ್ ಆಯೋಗಕ್ಕೆ ಸೂಚಿಸಿದೆ/
ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ ಶುಕ್ರವಾರ, ಏ.26ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಗೊಳಿಸಿ ಆದೇಶಿಸಿದೆ.
ಈ ಹಿಂದೆ ಏ.15ರಂದು ನಡೆದಿದ್ದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪೂರ್ಣ ಚಿತ್ರ ವೀಕ್ಷಿಸಿದ ಬಳಿಕ "ಪಿಎಂ ನರೇಂದ್ರ ಮೋದಿ" ಚಿತ್ರದ ಬಗೆಗೆ ತಮ್ಮ ಅಭಿಪ್ರಾಯವನ್ನು ಮುಚ್ಚಿದ ಲಕೋಟೆಯಲ್ಲಿ ತನಗೆ ನೀಡುವಂತೆ ಆಯೋಗಕ್ಕೆ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com