500 ಕೋಟಿಯ 'ರಾಮಾಯಣ'ದಲ್ಲಿ ಹೃತಿಕ್ ರಾಮ, ದೀಪಿಕಾ ಸೀತೆ!

ಬಾಲಿವುಡ್ ಮ್ಯಾಚೊ ಮ್ಯಾನ್ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುವ ಸಾಧ್ಯತೆ ಇದೆ.
ಹೃತಿಕ್ ರೋಷನ್-ದೀಪಿಕಾ ಪಡುಕೋಣೆ
ಹೃತಿಕ್ ರೋಷನ್-ದೀಪಿಕಾ ಪಡುಕೋಣೆ
ಮುಂಬೈ: ಬಾಲಿವುಡ್ ಮ್ಯಾಚೊ ಮ್ಯಾನ್ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುವ ಸಾಧ್ಯತೆ ಇದೆ.
ನಿತೇಶ್ ತಿವಾರಿ, ಪೌರಾಣಿಕ ಚಿತ್ರ 'ರಾಮಾಯಣ' ನಿರ್ದೇಶಿಸುತ್ತಿದ್ದು, ರಾಮನಾಗಿ ಹೃತಿಕ್, ಸೀತೆಯಾಗಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತೊಂದು ಬಿಟೌನ್ ನಲ್ಲಿ ಕೇಳಿಬರುತ್ತಿದೆ.
ಈ ಚಿತ್ರ ನಿತೇಶ್ ಅವರ ಮಹತ್ವಾಕಾಂಕ್ಷೆ ಯೋಜನೆಯಂತೆ. ಈಗಾಗಲೇ ಹೃತಿಕ್ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಚಿತ್ರವನ್ನು 3ಡಿಯಲ್ಲಿ ಚಿತ್ರೀಕರಿಸಲಾಗುವುದಂತೆ.
500 ಕೋಟಿ ಭಾರೀ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com