ಸಿನಿಮಾದಲ್ಲಿ ವ್ಯಕ್ತಿಯ ಫೋನ್ ನಂಬರ್ ದುರ್ಬಳಕೆ; ಕ್ಷಮೆ ಕೇಳಿದ ನಟಿ ಸನ್ನಿ ಲಿಯೋನ್

ಸಿನಿಮಾದಲ್ಲಿ ವ್ಯಕ್ತಿಯ ಫೋನ್ ನಂಬರ್ ಬಹಿರಂಗ ಪಡಿಸಿ ಸಮಸ್ಯೆಗೆ ಕಾರಣವಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೊನೆಗೂ ಆ ವ್ಯಕ್ತಿಯ ಕ್ಷಮೆ ಕೋರಿದ್ದಾರೆ.

Published: 03rd August 2019 12:00 PM  |   Last Updated: 03rd August 2019 03:30 AM   |  A+A-


Sunny Leone says sorry to Delhi man for giving out his number in 'Arjun Patiala' Movie

ಸಂಗ್ರಹ ಚಿತ್ರ

Posted By : SVN SVN
Source : Online Desk
ಮುಂಬೈ: ಸಿನಿಮಾದಲ್ಲಿ ವ್ಯಕ್ತಿಯ ಫೋನ್ ನಂಬರ್ ಬಹಿರಂಗ ಪಡಿಸಿ ಸಮಸ್ಯೆಗೆ ಕಾರಣವಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೊನೆಗೂ ಆ ವ್ಯಕ್ತಿಯ ಕ್ಷಮೆ ಕೋರಿದ್ದಾರೆ.

ಬಾಲಿವುಡ್ ನಟಿ ಸನ್ನಿ ಲಿಯೋನ್ ಸಿನಿಮಾದಲ್ಲಿ ಫೋನ್ ನಂಬರ್ ಬಳಸಿಕೊಂಡಿದ್ದಕ್ಕೆ ಸಂತ್ರಸ್ಥ ವ್ಯಕ್ತಿಗೆ ಕ್ಷಮೆ ಕೇಳಿದ್ದಾರೆ. ಇತ್ತೀಚೆಗೆ ಖಾಸಗಿ ಚಾನೆಲ್‍ನ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರಿಗೆ ಪ್ರಕರಣ ಕುರಿತಂತೆ ನಿರೂಪಕ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸನ್ನಿ ಚಿತ್ರದ ದೃಶ್ಯವೊಂದರಲ್ಲಿ ನಿಮ್ಮ ಫೋನ್ ನಂಬರ್ ದುರುಪಯೋಗಿಸಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನಾನು ಉದ್ದೇಶಪೂರ್ವಕವಾಗಿ ನಾನು ನಂಬರ್ ಬಳಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳೆದ ಜುಲೈ 26ರಂದು ಸನ್ನಿ ಲಿಯೋನ್ ಅಭಿನಯದ 'ಅರ್ಜುನ ಪಟಿಯಾಲಾ' ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ದೃಶ್ಯವೊಂದರಲ್ಲಿ ನಟಿ ಸನ್ನಿ ಲಿಯೋನ್ ತಮ್ಮ ಮೊಬೈಲ್ ನಂಬರ್ ತಿಳಿಸುತ್ತಾರೆ. ಇದು ನಿಜವಾಗಿಯೂ ಸನ್ನಿ ಲಿಯೋನ್ ನಂಬರ್ ಎಂದು ತಿಳಿದುಕೊಂಡಿದ್ದ ಅಭಿಮಾನಿಗಳು ಆ ನಂಬರ್ ಗೆ ಕರೆ ಮಾಡಲು ಶುರು ಮಾಡಿದ್ದರು. ಆದರೆ ಈ ನಂಬರ್ ದೆಹಲಿಯ ಪೀತಮಪುರದ ಯುವಕ ಪುನೀತ್ ಅಗರ್ ವಾಲ್ ಅವರ ಆಗಿದ್ದು, ನಾನು ಬಾಲಿವುಡ್ ನಟಿ ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕರೆ ಮಾಡಬೇಡಿ ಎಂದು ಮನವಿ ಮಾಡಿದರೂ ಕೇಳದ ಸನ್ನಿ ಅಭಿಮಾನಿಗಳು ಪದೇ ಪದೇ ಕರೆ ಮಾಡಿದ್ದಾರೆ. 

ಇದರಿಂದ ಆಕ್ರೋಶಗೊಂಡ ಪುನೀತ್ ಜುಲೈ 30ರಂದು ಸ್ಥಳೀಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ಈ ವಿಚಾರ ವ್ಯಾಪಕ ವೈರಲ್ ಕೂಡ ಆಗಿತ್ತು.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp