ನಟಿ ರಾಖಿ ಸಾವಂತ್ ವಿವಾಹ! ಹನಿಮೂನ್ ಪೋಟೋಗಳು ವೈರಲ್

ಹಣೆಯ ಮೇಲೆ ಸಿಂಧೂರ, ಕೈ ತುಂಬಾ ಮೆಹಂದಿ, ಗಾಜುಗಳನ್ನು ಧರಿಸಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಾಲಿವುಡ್ ಬಿಚ್ಚಮ್ಮ ಖ್ಯಾತಿಯ ರಾಖಿ ಸಾವಂತ್, ಕೊನೆಗೂ ಮದುವೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

Published: 05th August 2019 12:00 PM  |   Last Updated: 05th August 2019 01:46 AM   |  A+A-


Rakhi Sawant

ರಾಖಿ ಸಾವಂತ್

Posted By : ABN ABN
Source : Online Desk
ಮುಂಬೈ: ಹಣೆಯ ಮೇಲೆ ಸಿಂಧೂರ, ಕೈ ತುಂಬಾ ಮೆಹಂದಿ, ಗಾಜುಗಳನ್ನು ಧರಿಸಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಾಲಿವುಡ್ ಬಿಚ್ಚಮ್ಮ ಖ್ಯಾತಿಯ ರಾಖಿ ಸಾವಂತ್, ಕೊನೆಗೂ ಮದುವೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.  

ವಧುವಿನ ರೀತಿಯಲ್ಲಿ ಅಲಂಕೃತಗೊಂಡಿರುವ ಪೋಟೋಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಖಿ  ಸಾವಂತ್, ಭಯಗೊಂಡಿದ್ದೆ. ಆದರೂ ನಾನು ಮದುವೆಯಾಗಿದ್ದೇನೆ ಎಂದು ರಾಕಿ ಸಾವಂತ್ ಹೇಳಿದ್ದಾಳೆ.

ತಾನೂ ವಿವಾಹವಾಗಿರುವ ಪತಿಯ ಹೆಸರು ರಿತೇಶ್. ಇಂಗ್ಲೆಂಡ್ ನಲ್ಲಿದ್ದಾರೆ. ನನ್ನ ವೀಸಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಾನು ಅವರನ್ನು ಸೇರುತ್ತೇನೆ. ಭಾರತದಲ್ಲಿ ನನ್ನ ಕೆಲಸವನ್ನು ಮುಂದುವರೆಸುತ್ತೇನೆ. ಟಿವಿ ಶೋ ನಿರ್ಮಾಣ ಮಾಡುತ್ತೇನೆ. ಬಹುದಿನಗಳ ಕನಸು ಈಗ ಪೂರ್ಣಗೊಂಡಿದೆ ಎಂದು ರಾಖಿ ಸಾವಂತ್ ಮಾಹಿತಿ ನೀಡಿದ್ದಾರೆ.

ಅದ್ಬುತ ಪತಿ ಸಿಕ್ಕಿರುವುದಕ್ಕೆ ಜೀಸಸ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಭು ಚಾವ್ಲಾ ಜೊತೆಗಿನ ಮೊದಲ ಸಂದರ್ಶನ ನೋಡಿದ್ದಾಗಿನಿಂದಲೂ ಆತ ನನ್ನ ಅಭಿಮಾನಿಯಾಗಿದ್ದು, ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿದ್ದರು. ನಂತರ ಅವರೊಂದಿಗೆ ಮಾತನಾಡಿದ ನಂತರ ಸ್ನೇಹಿತರಾದೇವು. ಒಂದೂವರೆ ವರ್ಷಗಳಿಂದಲೂ ನಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂದು ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ವಿವಾಹವಾದ ನಂತರ ಹಿಂದೂ , ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಹೋಟೆಲ್ ನಲ್ಲಿ ವಿವಾಹ ಸಮಾರಂಭ ನಡೆದಿದ್ದಾಗಿ ಅವರು ತಿಳಿಸಿದ್ದು, ಹನಿಮೂನ್ ನಲ್ಲಿರುವ ಕೆಲವೊಂದು ಪೋಟೋಗಳನ್ನು ಇನ್ಸಾಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

2020ರೊಳಗೆ ಮಕ್ಕಳನ್ನು ಪಡೆಯುವ ಯೋಚನೆಯಲ್ಲಿರುವುದಾಗಿ ಆಕೆ ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp