'ರಜನಿಗಂಧ' ಖ್ಯಾತಿಯ ಹಿಂದಿ ನಟಿ ವಿದ್ಯಾ ಸಿನ್ಹಾ ನಿಧನ

ಚೋಟಿ ಸಿ ಬಾತ್, ರಜನಿಗಂಧ ಮತ್ತು ಪತಿ ಪತ್ನಿ ಔರ್ ವೋ ನಂತಹಾ ಹಿಂದಿ ಚಿತ್ರಗಳಿಂಡ ಹೆಸರಾಗಿದ್ದ ಲನಚಿತ್ರ ಮತ್ತು ಕಿರುತೆರ ನಟ ವಿದ್ಯಾ ಸಿನ್ಹಾ ಗುರುವಾರ ನಿಧನರಾದರು. 
ವಿದ್ಯಾ ಸಿನ್ಹಾ  
ವಿದ್ಯಾ ಸಿನ್ಹಾ  

ಚೋಟಿ ಸಿ ಬಾತ್, ರಜನಿಗಂಧ ಮತ್ತು ಪತಿ ಪತ್ನಿ ಔರ್ ವೋ ನಂತಹಾ ಹಿಂದಿ ಚಿತ್ರಗಳಿಂಡ ಹೆಸರಾಗಿದ್ದ ಲನಚಿತ್ರ ಮತ್ತು ಕಿರುತೆರ  ನಟ ವಿದ್ಯಾ ಸಿನ್ಹಾ ಗುರುವಾರ ನಿಧನರಾದರು. ಆಕೆಗೆ  71 ವರ್ಷ ವಯಸ್ಸಾಗಿತ್ತು.ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಟಿಯನ್ನು ಇತ್ತೀಚೆಗೆ  ಮುಂಬೈನ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

1974 ರಲ್ಲಿ ಚಲನಚಿತ್ರ ನಿರ್ಮಾಪಕ ಬಸು ಚಟರ್ಜಿ ಅವರ ಚಿತ್ರ ರಜನಿಗಂಧದಲ್ಲಿ ಸಿನ್ಹಾ ತನ್ನ ಅದ್ಭುತ ಪಾತ್ರವನ್ನು ನಿರ್ವಹಿಸಿ ಪ್ರಸಿದ್ದಿಗೆ ಬಂದಿದ್ದರು.ಈ ಚಿತ್ರ ಬಹುತೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.ಅವರು ಚಿತ್ರದಲ್ಲಿ ಅಮೋಲ್ ಪಾಲೇಕರ್ ಅವರೊಂದಿಗೆಜೋಡಿಯಾಗಿದ್ದು  ಅಕೆಯ ಸರಳ ಒಆತ್ರದಿಂದ ಜನಮೆಚ್ಚುಗೆ ಗಳಿಸಿಕೊಟ್ಟಿತ್ತು

ವಿದ್ಯಾ ಸಿನ್ಹಾ  ಅಭಿನಯದ ಹಲವು ಹಾಡುಗಳು ಅಭಿಮಾನಿಗಳ ಮೆಚ್ಚಿನವುಗಳಾಗಿದ್ದವು.ಇನ್ನು ಚಿತ್ರರಂಗದಿಂದ ಕೆಲ ವರ್ಷಗಳ ವಿರಾಮ ಪೊಅಡೆದ ನಟಿ ಸಿನ್ಹಾ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.  ಕುಬೂಲ್ ಹೈ,ಜಿಂದಗಿ ವಿನ್ಸ್ ಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಇತ್ತೀಚೆಗೆ ಸ್ಟಾರ್ ಪ್ಲಸ್ ’ಕುಲ್ಫಿ ಕುಮಾರ್ ಬಜೇವಾಲಾ ದಲ್ಲಿಯೂ ನಟಿಸಿದ್ದಾರೆ.ನ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಬಾಡಿಗಾರ್ಡ್ ನಲ್ಲೂ ಈ ಅಭಿನೇತ್ರಿ ಇದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com