'ಹೃತಿಕ್ ರೋಷನ್' ಗೆ  ಪ್ರಪಂಚದ ಅತಿ ಸುಂದರ ವ್ಯಕ್ತಿ ಬಿರುದು

ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್  ಪ್ರಪಂಚದ ಅತಿ ಸುಂದರ ವ್ಯಕ್ತಿ ಎಂಬ ಬಿರುದಿಗೆ ಭಾಜನರಾಗಿದ್ದಾರೆ. ಅಮೆರಿಕ ಮೂಲದ ಸಂಸ್ಥೆಯೊಂದು ಈ ಸ್ಪರ್ಧೆ ನಡೆಸಿದೆ.
'ಹೃತಿಕ್ ರೋಷನ್' ಗೆ  ಪ್ರಪಂಚದ ಅತಿ ಸುಂದರ ವ್ಯಕ್ತಿ ಬಿರುದು

ಮುಂಬೈ: ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್  ಪ್ರಪಂಚದ ಅತಿ ಸುಂದರ ವ್ಯಕ್ತಿ ಎಂಬ ಬಿರುದಿಗೆ ಭಾಜನರಾಗಿದ್ದಾರೆ. 

ಅಮೆರಿಕ ಮೂಲದ ಸಂಸ್ಥೆಯೊಂದು ಈ ಸ್ಪರ್ಧೆ ನಡೆಸಿದ್ದು,  ಹೃತಿಕ್ ರೋಷನ್ ಅವರು, ಕ್ರಿಸ್ ಇವಾನ್ಸ್, ಡೇವಿಡ್ ಬೆಕ್ಹ್ಯಾಮ್, ರಾಬರ್ಟ್ ಪ್ಯಾಟಿನ್ಸೆನ್, ಒಮರ್ ಬೋರ್ಕನ್  ಅಲ್ ಗಾಲಾ ಅವರನ್ನು ಹಿಂದಿಕ್ಕಿದ್ದಾರೆ.

ಹೃತಿಕ್ ರೋಷನ್ ಇದೇ ಮೊದಲ ಬಾರಿಗೆ ಇಂತಹ ಪ್ರಶಸ್ತಿಯನ್ನು ಪಡೆಯುತ್ತಿಲ್ಲ. ಇತ್ತೀಚಿಗೆ ನಡೆದ ಸ್ಪರ್ಧೆಯಲ್ಲಿ ವಿಶ್ವದ ಟಾಪ್ 5 ಸುಂದರ ವ್ಯಕ್ತಿ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದರು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೃತಿಕ್ ರೋಷನ್, ಮುಖದ ಅಂದ ಎಂದಿಗೂ ಸಾಧನೆ ಅನ್ನಿಸಿಕೊಳ್ಳುವುದಿಲ್ಲ. ಈ ಜಗತ್ತಿನಲ್ಲಿ ಹೆಚ್ಚು ಮೌಲ್ಯಯುತ ಹಾಗೂ ನಿರೀಕ್ಷಿತವಾದುದು ಉತ್ತಮ ವ್ಯಕ್ತಿತ್ವ. ಹಾಗಾಗಿ ಉತ್ತಮ ವ್ಯಕ್ತಿತ್ವ ನಮ್ಮನ್ನು ಯಾವಾಗಲೂ ಆಕರ್ಷಿತರನ್ನಾಗಿ ಮಾಡುತ್ತದೆ ಎಂದಿದ್ದಾರೆ. 

ಸೂಪರ್ 30 ಸಿನಿಮಾದ ಯಶಸ್ಸಿನಲ್ಲಿರುವ ಹೃತಿಕ್ ಕ್ರಿಶ್-4 ಸಿನಿಮಾದ ತಯಾರಿಯಲ್ಲಿ ಬ್ಯೂಸಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com