ಕರೀನಾ ನನ್ನ ತಂದೆಯ ಪತ್ನಿ ಅಷ್ಟೇ, ಅದಕ್ಕಿಂತ?: ಸೈಫ್ ಪುತ್ರಿ ಸಾರಾ ಅಲಿ ಖಾನ್ ಹೇಳಿದ್ದೇನು?

ತಮ್ಮ ಎರಡನೇ ತಾಯಿ ಕರೀನಾ ಕಪೂರ್ ಬಗ್ಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. 
ಕರೀನಾ ಕಪೂರ್-ಸಾರಾ ಅಲಿ ಖಾನ್
ಕರೀನಾ ಕಪೂರ್-ಸಾರಾ ಅಲಿ ಖಾನ್

ಮುಂಬೈ: ತಮ್ಮ ಎರಡನೇ ತಾಯಿ ಕರೀನಾ ಕಪೂರ್ ಹಾಗೂ ತಾವು ಉತ್ತಮ ಸ್ನೇಹಿತರಾಗಿದ್ದು, ಅವರನ್ನು ತುಂಬಾ ಗೌರವಿಸುತ್ತೇನೆ ಎಂದು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹೇಳಿಕೊಂಡಿದ್ದಾರೆ. 

ತಾವು ಕರೀನ್ ಅವರ ಅಭಿಮಾನಿಯಾಗಿದ್ದು, ಅವರು ನನ್ನ ಉತ್ತಮ ಸ್ನೇಹಿತೆ. ಅದಕ್ಕಿಂತ ಹೆಚ್ಚು ಅವರು ನಮ್ಮ ತಂದೆಯ ಪತ್ನಿ. ಅವರಿಗೆ ನಾನು ತುಂಬಾ ಗೌರವಿಸುತ್ತೇನೆ. ತಂದೆಗೆ ಯಾವಾಗಲೂ ಸಂತೋಷದಿಂದ ನೋಡುಕೊಳ್ಳುತ್ತಾರೆ. ನಾವಿಬ್ಬರೂ ಒಂದು ವೃತ್ತಿಯಲ್ಲಿದ್ದು, ಇಬ್ಬರದು ಒಂದೇ ಪ್ರಪಂಚ ಎಂದು ಸಾರಾ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.  

ಕರೀನಾ ಅವರ ವೃತ್ತಿಪರ ಶೈಲಿಯನ್ನು ಇಷ್ಟಪಡುತ್ತೇನೆ. ಅವರು ತುಂಬಾ ವೃತ್ತಿಪರರು. ತಮ್ಮ ಕೆಲಸವನ್ನು ಅದ್ಭುತವಾಗಿ ನಿಭಾಯಿಸುತ್ತಾರೆ. ಹೀಗಾಗಿ ಅವರ ವೃತ್ತಿಪರ ಶೈಲಿಯನ್ನು ಅಳವಡಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com