ಬಾಲಕೋಟ್ ಏರ್ ಸ್ಟ್ರೈಕ್ ಕುರಿತು ಬಾಲಿವುಡ್ ಸಿನಿಮಾ, ವಿವೇಕ್ ಒಬೆರಾಯ್ ನಾಯಕ

ಉರಿ ಚಿತ್ರದ ನಂತರ ಈಗ ಬಾಲಿವುಡ್ ನಲ್ಲಿ "ಬಾಲಾಕೋಟ್" ಎಂಬ ಹೆಸರಿನ ಚಿತ್ರ ನಿರ್ಮಾಣವಾಗುತ್ತಿದ್ದು, ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಮಿಂಚಿದ್ದ ನಟ ವಿವೇಕ್ ಒಬೆರಾಯ್ ಅವರು
ಅಭಿನಂದನ್ - ವಿವೇಕ್ ಒಬೆರಾಯ್
ಅಭಿನಂದನ್ - ವಿವೇಕ್ ಒಬೆರಾಯ್

ಬೆಂಗಳೂರು: ಉರಿ ಚಿತ್ರದ ನಂತರ ಈಗ ಬಾಲಿವುಡ್ ನಲ್ಲಿ "ಬಾಲಾಕೋಟ್" ಎಂಬ ಹೆಸರಿನ ಚಿತ್ರ ನಿರ್ಮಾಣವಾಗುತ್ತಿದ್ದು, ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಮಿಂಚಿದ್ದ ನಟ ವಿವೇಕ್ ಒಬೆರಾಯ್ ಅವರು ಈಗ ಭಾರತೀಯ ವಾಯುಪಡೆ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಪಾಕಿಸ್ತಾನದ ಬಾಲಕೋಟ್‌ ನ ಉಗ್ರರ ತಾಣಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿ ಕುರಿತು ಮತ್ತು ಅಭಿನಂದನ್ ವರ್ಧಮಾನ್ ಬಂಧನ ಮತ್ತು ಬಿಡುಗಡೆ ಕುರಿತು ಸಿನಿಮಾ ಮಾಡಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ, ದೆಹಲಿ ಹಾಗೂ ಆಗ್ರಾದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.

ಹಿಂದಿ, ತಮಿಳು ಮತ್ತು ತೆಲಗು ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ವಿವೇಕ್ ಒಬೆರಾಯ್ ಚಿತ್ರದಲ್ಲಿ ನಟಿಸಲು ವಾಯುಪಡೆಯ ಅನುಮತಿ ಪಡೆದುಕೊಂಡಿದ್ದಾರೆ. ಮೂರು ಭಾಷೆಯಗಳ ಖ್ಯಾತ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಚಿತ್ರ ಹಿಂದಿ, ತಮಿಳು ಮತ್ತು ತೆಲಗು ಮೂರು ಭಾಷೆಯಲ್ಲಿ ನಿರ್ಮಾಣವಾಗಲಿದ್ದು, ವಿವೇಕ್ ಒಬೆರಾಯ್ ಚಿತ್ರದಲ್ಲಿ ನಟಿಸಲು ವಾಯುಪಡೆಯ ಅನುಮತಿ ಪಡೆದುಕೊಂಡಿದ್ದಾರೆ.

ಮೂರು ಭಾಷೆಗಳ ಖ್ಯಾತ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಭಾರತೀಯನಾಗಿ ಇಂತಹ ಚಿತ್ರದಲ್ಲಿ ನಟಿಸಲು ನನಗೆ ಹೆಮ್ಮೆ ಇದೆ. ನಮ್ಮ ರಕ್ಷಣಾ ಪಡೆಗಳು ಮಾಡಿದ ಸಾಹಸವನ್ನು ಚಿತ್ರದ ಮೂಲಕ ಜನರಿಗೆ ತೋರಿಸುವುದು ನನ್ನ ಕರ್ತವ್ಯವಾಗಿದೆ. ಜನರನ್ನು ತಲುಪಲು ಸಿನಿಮಾ ಪ್ರಭಾವಿ ಮಾಧ್ಯಮವಾಗಿದೆ" ಎಂದು ವಿವೇಕ್ ಒಬೆರಾಯ್ ಹೇಳಿದ್ದಾರೆ.

ಭಾರತೀಯ ವಾಯುಪಡೆ "ಬಾಲಕೋಟ್ ಮೇಲೆ ನಡೆಸಿದ ದಾಳಿ ಪ್ರಮುಖವಾದದ್ದು. ಮಾಧ್ಯಮಗಳ ಮೂಲಕ ಎಲ್ಲವನ್ನು ಗಮನಿಸಿದ್ದೇನೆ. ನಡೆದ ಎಲ್ಲಾ ಘಟನೆಗಳಿಗೆ ಚಿತ್ರದಲ್ಲಿಯೂ ನ್ಯಾಯ ಒದಗಿಸುವ ಭರವಸೆ ಇದೆ ಎಂದು ವಿವೇಕ್ ಒಬೆರಾಯ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com