ಎನ್ ಆರ್ ಐ ರಿತೇಶ್,ರಾಖಿ ಸಾವಂತ್  ದಾಂಪತ್ಯ ಜೀವನ ಒಂದೇ ತಿಂಗಳಿಗೆ ಮುರಿದು ಬಿತ್ತಾ?

ಎನ್ ಆರ್ ಐ ರಿತೇಶ್, ರಾಖಿ ಸಾವಂತ್  ದಾಂಪತ್ಯ ಜೀವನ ಒಂದೇ ತಿಂಗಳಿಗೆ ಮುರಿದು ಬಿತ್ತಾ?ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ. ರಾಖಿ ಸಾವಂತ್ ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಎರಡು ಅನಿಮೇಟೆಡ್ ಪೋಟೋಗಳು ಇದನ್ನು ಪುಷ್ಟಿಕರಿಸುವಂತಿವೆ.  

Published: 25th August 2019 11:52 AM  |   Last Updated: 25th August 2019 11:55 AM   |  A+A-


ರಾಖಿ ಸಾವಂತ್

Posted By : Nagaraja AB
Source : Online Desk

ಮುಂಬೈ:  ಇತ್ತೀಚಿಗೆ  ಇನ್ಸಾಟಾಗ್ರಾಮ್ ನಲ್ಲಿ ಎನ್ ಆರ್ ಐ ರಿತೇಶ್  ಜೊತೆಗಿನ  ವಿವಾಹದ ಚಿತ್ರಗಳನ್ನು ಹಾಕಿ ಬಾಲಿವುಡ್ ವಿವಾದಾತ್ಮಾಕ ನಟಿ ರಾಖಿ ಸಾವಂತ್ ಸುದ್ದಿಯಾದದ್ದು ಗೊತ್ತೆ ಇದೆ. ಈ ವಿವಾಹದ ಬಗ್ಗೆ ಹಲವು ಮಂದಿ ನಿರಾಕರಿಸಿದರೆ ಮತ್ತೆ ಕೆಲವರು ಅಂತೂ ಇಂತೂ ಕೊನೆಗೂ  ರಾಖಿ ಸಾವಂತ್  ತನ್ನ ಕನಸಿನ ಹುಡುಗನನ್ನು ಆರಿಸಿಕೊಂಡಿದ್ದಾರೆ ಎಂದು ಭಾವಿಸಿದ್ದರು. 

ಇದೀಗ  ಈ ಜೋಡಿಯ  ಒಂದು ತಿಂಗಳ ದಾಂಪತ್ಯ ಜೀವನ ಅಂತ್ಯವಾಯಿತಾ? ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ. ರಾಖಿ ಸಾವಂತ್ ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಎರಡು ಅನಿಮೇಟೆಡ್ ಪೋಟೋಗಳು ಇದನ್ನು ಪುಷ್ಟಿಕರಿಸುವಂತಿವೆ.  

ಒಂದನೇ ಪೋಟೋದಲ್ಲಿ  ಒಡೆದ ಹೃದಯದೊಂದಿಗೆ ಹುಡುಗಿಯೊಬ್ಬಳು ಅಳುತ್ತಿರುವ ಚಿತ್ರವಿದೆ.  ರಾಖಿ ಸಾವಂತ್ ಹನಿಮೂನ್ ದಿನಗಳಲ್ಲಿ ತೊಂದರೆ ಉಂಟಾಗಿದೆಯಾ? ಎಂಬಂತಹ ಪ್ರಶ್ನೆಗಳನ್ನು ಈ ಪೋಟೋ ಹುಟ್ಟುಹಾಕಿದೆ. 

 
 
 
 
 
 
 
 
 
 
 
 
 
 
 

A post shared by Rakhi Sawant (@rakhisawant2511) on

 

ಆದಾಗ್ಯೂ, ಎರಡನೇ ಪೋಟೋದಲ್ಲಿ , ಇಂಗ್ಲೆಂಡ್ ಗೆ ಹೋಗಲು ಟಿಕೆಟ್ ಬಲು ದುಬಾರಿ ಅಂತಾ ಅಳುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಆದರೆ, ರಾಖಿ ಸಾವಂತ್ ನಿಗೂಢ ವಿವಾಹದಲ್ಲಿ ಯಾವುದು ಸತ್ಯ ಎಂಬುದನ್ನು ಅವರೇ ಹೇಳಬೇಕಾಗಿದೆ. 

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp