ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಸೋದರಿ ಶ್ಯಾಮಾ ನಿಧನ

ಬಾಲಿವುಡ್ ನಟ  ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಶ್ಯಾಮಾ ತಮ್ಶಿ ಸಿದ್ದಿಕಿ(26) ಕ್ಯಾನ್ಸರ್ ವಿರುದ್ಧದ ಸುದೀರ್ಘಹೋರಾಟದ ನಂತರ ಶನಿವಾರ ನಿಧನರಾದರೆಂದುಯ್ ಕುಟುಂಬ ಮೂಲಗಳು ಹೇಳಿದೆ.
ತನ್ನ ಸೋದರಿಯೊಡನೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ
ತನ್ನ ಸೋದರಿಯೊಡನೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ

ಮುಂಬೈ: ಬಾಲಿವುಡ್ ನಟ  ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಶ್ಯಾಮಾ ತಮ್ಶಿ ಸಿದ್ದಿಕಿ(26) ಕ್ಯಾನ್ಸರ್ ವಿರುದ್ಧದ ಸುದೀರ್ಘಹೋರಾಟದ ನಂತರ ಶನಿವಾರ ನಿಧನರಾದರೆಂದುಯ್ ಕುಟುಂಬ ಮೂಲಗಳು ಹೇಳಿದೆ.

ಶ್ಯಾಮಾ ಅವರಿಗೆ 18 ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಎಂಟು ವರ್ಷಗಳಿಂದ ಈ ಕಾಯಿಲೆಯೊಂದಿಗೆ ಹೋರಾಟ ನಡೆಸಿದ್ದರು.

ಇನ್ನು ಸೋದರಿ ಸಾವಿನ ಸಮಯದಲ್ಲಿ ನಟ ನವಾಜುದ್ದೀನ್ ಅಮೆರಿಕಾದಲ್ಲಿ  "ನೋ ಲ್ಯಾಂಡ್ಸ್ ಮ್ಯಾನ್" ಚಿತ್ರೀಕರಣದಲ್ಲಿದ್ದರು ಎಂದು ಬಲ್ಲಮೂಲಗಳು ಪಿಟಿಐಗೆ ಮಾಹಿತಿ ನೀಡಿದೆ.

ಮೃತರ ಂತ್ಯಕ್ರಿಯೆ ಭಾನುವಾರ ಉತ್ತರ ಪ್ರದೇಶದ ಬುಧಾನದಲ್ಲಿ ನಡೆಯಲಿದೆ.

ಕಳೆದ ಅಕ್ಟೋಬರ್ ನಲ್ಲಿ ನಟ ನವಾಜುದ್ದೀನ್ ತನ್ನ ಸೋದರಿಯ ಕ್ಯಾನ್ಸರ್ ರೋಗದ ಬಗೆಗೆ ಟ್ವೀಟ್ ಮೂಲಕ ಹಂಚಿಕೊಂಡಿದ್ದರು. "ನನ್ನ ತಂಗಿಗೆ 18 ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆದರೆ ಆಕೆಯ ವಿಲ್ ಪವರ್(ಇಚ್ಚಾಶಕ್ತಿ) ಹಾಗೂ ಧೈರ್ಯವೇ ಆಕೆಯನ್ನು ಇಲ್ಲಿವರೆಗೆ ಬದುಕಿಸಿದೆ.ಅವಳು ಇಂದು 25 ನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ತನ್ನ ಕಾಯಿಲೆ ವಿರುದ್ಧ ಇನ್ನೂ ಹೋರಾಟ ಮುಂದುವರಿಸಿದ್ದಾಳೆ" ಎಂದು ಅವರು ಬರೆದಿದ್ದರು./

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com