ಜವಾಹರಲಾಲ್ ನೆಹರು ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಮಾಡೆಲ್ ಪಾಯಲ್ ರೊಹ್ಟಗಿ ಬಂಧನ

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಡೆಲ್ ಮತ್ತು ನಟಿ  ಪಾಯಲ್ ರೊಹ್ಟಗಿ ಅವರನ್ನು ಅವರ ಅಹಮದಾಬಾದ್ ನಿವಾಸದಿಂದ ಭಾನುವಾರ ರಾಜಸ್ಥಾನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಾಯಲ್ ರೊಹ್ಟಗಿ
ಪಾಯಲ್ ರೊಹ್ಟಗಿ

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಡೆಲ್ ಮತ್ತು ನಟಿ  ಪಾಯಲ್ ರೊಹ್ಟಗಿ ಅವರನ್ನು ಅವರ ಅಹಮದಾಬಾದ್ ನಿವಾಸದಿಂದ ಭಾನುವಾರ ರಾಜಸ್ಥಾನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

"ಪಾಯಲ್ ರೊಹ್ಟಗಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಲಾಗಿದೆ" ಎಂದು ಎಸ್ಪಿ ಮಮತಾ ಗುಪ್ತಾ ಹೇಳಿದ್ದಾರೆ.ಮೂಲಗಳ ಪ್ರಕಾರ, ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿಯ ನೇತೃತ್ವದ ಪೊಲೀಸ್ ತಂಡ ಆಕೆಯನ್ನು ವಶಕ್ಕೆ ಪಡೆದಿದೆ. ಆಕೆಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

"ಮೋತಿಲಾಲ್ ನೆಹರೂ ಕುರಿತಂತೆ ವೀಡಿಯೋ ಮಾಡಿದ್ದಕ್ಕಾಗಿ ರಾಜಾಸ್ಥಾನ ಪೋಲೀಸರಿಂದ ನಾನು ಬಂಧಿಸಲ್ಪಟ್ಟಿದ್ದೇನೆ. ಈ ವೀಡಿಯೋ ಮಾಡಲು ನಾನು ಗೂಗಲ್, ಫ್ರೀಡಂ ಆಫ್ ಸ್ಪೀಚ್ ಇಸ್ ಅ ಜೋಕ್  ನಿಂದ ಮಾಹಿತಿಯನ್ನು ತೆಗೆದುಕೊಂಡಿದ್ದೇನೆ." ಎಂದು ರೊಹ್ಟಗಿ ಟ್ವೀಟ್ ಮಾಡಿದ್ದಾರೆ. ಇದನ್ನು ಅವರು  @PMOIndia @HMOIndia ಗೆ ಸಹ ಟ್ಯಾಗ್ ಮಾಡಿದ್ದಾರೆ.

ಮಾಜಿ ಪ್-ರಧಾನಿಗಳಾದ ಇಂದಿರಾಗಾಂಧಿ  ಮತ್ತು ಜವಾಹರಲಾಲ್ ನೆಹರುಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಡಿಸೆಂಬರ್‌ನಲ್ಲಿ ನಟಿಗೆ ನೋಟೀಸ್ ನೀಡಲಾಗಿತ್ತು.

"ರಾಜಸ್ಥಾನ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಾರ್ಮೇಶ್ ಶರ್ಮಾ ಅವರು ಸೆಪ್ಟೆಂಬರ್ 1 ರಂದು ರೊಹ್ಟಗಿ ತನಿಖೆಯ ಸಮಯದಲ್ಲಿ, ನಮ್ಮ ತಂಡ ಮುಂಬೈನಲ್ಲಿರುವ ಅವರ ನಿವಾಸವನ್ನು ತಲುಪಿದೆ. ನಂತರ, ನಾವು ಜೆ.ಎಲ್. ನೆಹರು, ಇಂದಿರಾ ಗಾಂಧಿ ಅವರ ಬಗ್ಗೆ ಆಕ್ಷೇಪಾರ್ಹ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ರೊಹ್ಟಗಿಯನ್ನು ನಾವು ಗುಜರಾತ್‌ನಲ್ಲಿರುವ ಆಕೆಯ ಪೋಷಕರ ಮನೆಯಲ್ಲಿ ಭೇಟಿಯಾಗಿದ್ದೇವೆ.  ಈ ಪ್ರಕರಣದಲ್ಲಿ ಉತ್ತರವನ್ನು ಸಲ್ಲಿಸಲು ನಾವು ಅವರಿಗೆ ನೋಟಿಸ್ ನೀಡಿದ್ದೇವೆ "ಎಂದು ಬುಂಡಿಯ ಸದರ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಲೋಕೇಂದ್ರ ಪಾಲಿವಾಲ್ ಎಎನ್‌ಐಗೆ ತಿಳಿಸಿದ್ದರು.

ಬುಂಡಿ ಸದರ್ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್‌ನಲ್ಲಿ ಶರ್ಮಾ ಅವರು ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಐಟಿ ಕಾಯ್ದೆಯ 66 ಮತ್ತು 67 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com