ಸಿಎಎ ವಿರುದ್ಧ ಪ್ರತಿಭಟನೆ ಬಗೆಗೆ ಮೌನ ಮುರಿದ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ

ಪೌರತ್ವ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಸಾದ್ಯಂತ ಪ್ರತಿಭಟನೆ, ಆಕ್ರೋಶಗಳು ಮುಗಿಲು ಮುಟ್ಟಿರುವ ಈ ಸಮಯದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಾವು ಕಾಯ್ದೆ ಕುರಿತಂತೆ ಮಾತನಾಡಿದ್ದಾರೆ. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಅಲಿಘರ್ ಮುಸ್ಲಿಮ್ ವಿವಿಗಳ ದ್ಯಾರ್ಥಿಗಳ ವಿರುದ್ಧದ ಪೊಲೀಸ್ ದೌರ್ಜನ್ಯದ ಬಗ್ಗೆ ಮೌನ ಮುರಿದಿರುವ ನಟಿ ,
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ

ಮುಂಬೈ: ಪೌರತ್ವ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಸಾದ್ಯಂತ ಪ್ರತಿಭಟನೆ, ಆಕ್ರೋಶಗಳು ಮುಗಿಲು ಮುಟ್ಟಿರುವ ಈ ಸಮಯದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಾವು ಕಾಯ್ದೆ ಕುರಿತಂತೆ ಮಾತನಾಡಿದ್ದಾರೆ. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಅಲಿಘರ್ ಮುಸ್ಲಿಮ್ ವಿವಿಗಳ ದ್ಯಾರ್ಥಿಗಳ ವಿರುದ್ಧದ ಪೊಲೀಸ್ ದೌರ್ಜನ್ಯದ ಬಗ್ಗೆ ಮೌನ ಮುರಿದಿರುವ ನಟಿ , ಪ್ರಜಾಪ್ರಭುತ್ವದಲ್ಲಿ, ಶಾಂತಿಯುತ ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರವು ತಪ್ಪು ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಭಾನುವಾರ ಸಂಜೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಪ್ರತಿಕ್ರಿಯಿಸಿದ ಬಾಲಿವುಡ್ ನಟಿ ಪ್ರಿಯಾಂಕಾ "ಪ್ರತಿ ಮಗುವಿಗೆ ಶಿಕ್ಷಣವು ನಮ್ಮ ಕನಸಾಗಿದೆ. ಶಿಕ್ಷಣವೇ ಅವರಿಗೆ ಸ್ವತಂತ್ರವಾಗಿ ಯೋಚಿಸಲು ಅಧಿಕಾರ ನೀಡಿದೆ. ನಾವು  ಅವರಿಗೆ ಧ್ವನಿ ಎತ್ತಲು ಕಲಿಸಿದ್ದೆವು. ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವದಲ್ಲಿ, ಒಬ್ಬರ ಧ್ವನಿಯನ್ನು ಹಿಂಸಾರೂಪದಿಂದ ಹತ್ತಿಕ್ಕುವುದು ತಪ್ಪು. ಪ್ರತಿ ಧ್ವನಿಯು ಭಾರತವನ್ನು ಬದಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ವಿದ್ಯಾರ್ಥಿಗಳು ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಪೊಲೀಸರು ಜಾಮಿಯಾ ಮಿಲಿಯಾ ಕ್ಯಾಂಪಸ್‌ಗೆ ಪ್ರವೇಶಿಸಿ ಅವರ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ. 

ಇನ್ನು ಚಿತ್ರೋದ್ಯಮದಲ್ಲಿನ ಖ್ಯಾತನಾಮರಾದ  ಫರ್ಹಾನ್ ಅಖ್ತರ್, ಹೃತಿಕ್ ರೋಷನ್, ಮೊಹಮ್ಮದ್ಝಿಶಾನ್ ಅಯೂಬ್,  ಪರಿಣಿತಿ ಚೋಪ್ರಾ, ಸಿದ್ಧಾರ್ಥ್ ಮಲ್ಹೋತ್ರಾ, ಹಿರಿಯ ಚಿತ್ರಕಥೆಗಾರ ಜಾವೇದ್ ಅಖ್ತರ್, ಚಲನಚಿತ್ರ ನಿರ್ಮಾಪಕವಿಶಾಲ್ ಭಾರಧ್ವಾಜ್,  ಅನುರಾಗ್ ಕಶ್ಯಪ್, ಮತ್ತು ಹಾಲಿವುಡ್ ನಟ ಜಾನ್ ಕುಸಾಕ್ ಸೇರಿದಂತೆ ಹಲವರು ವಿದ್ಯಾರ್ಥಿಗಳ ಒಗ್ಗಟ್ಟಿನ ಪರ ನಿಂತಿದ್ದಾರೆ.

ಸಿಎಎ ವಿರುದ್ಧ ದೆಹಲಿ, ಬೆಂಗಳೂರು, ಕಲಬುರ್ಗಿ ಸೇರಿ ಭಾರತದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com