ಪೌರತ್ವ ತಿದ್ದುಪಡಿ ಕಾಯ್ದೆ: ಮೌನ ಮುರಿದ ಬಾಲಿವುಡ್, ಸೈಫ್ ಅಲಿಖಾನ್ ಏನಂದ್ರು ಗೊತ್ತಾ?

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಬಾಲಿವುಡ್ ಕೊನೆಗೂ ಮೌನ ಮುರಿದಿದ್ದು, ನಟ ಸೈಫ್ ಅಲಿಖಾನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 
ಸೈಫ್ ಅಲಿಖಾನ್, ಹೃತ್ತಿಕ್ ರೋಷನ್
ಸೈಫ್ ಅಲಿಖಾನ್, ಹೃತ್ತಿಕ್ ರೋಷನ್

ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಬಾಲಿವುಡ್ ಕೊನೆಗೂ ಮೌನ ಮುರಿದಿದ್ದು, ನಟ ಸೈಫ್ ಅಲಿಖಾನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 

ದೇಶದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆ ಹೇಗೆ ಅಂತ್ಯಗೊಳ್ಳುತ್ತವೆ ಎಂಬ ಬಗ್ಗೆ ಆಶ್ಚರ್ಯದಿಂದ ನೋಡುತ್ತಿದ್ದೇವೆ. ಕಳವಳದ ಬಗ್ಗೆ ಅನೇಕ ಸಂಗತಿಗಳು ನಮಗೆ ಎಚ್ಚರಿಕೆ ನೀಡಿವೆ ಎಂದಿದ್ದಾರೆ. 

ಫರ್ಹಾನ್ ಅಖ್ತಾರ್, ಪರಿಣಿತಿ ಚೋಪ್ರಾ, ರಿಚಾ ಚಾದಾ, ಅನುರಾಗ್ ಕಶ್ಯಪ್, ಶಬಾನಾ ಅಜ್ಮಿ, ಜಾವೇದ್ ಅಖ್ತರ್, ಹೃತಿಕ್ ರೋಷನ್, ಸ್ವರಾ ಭಾಸ್ಕರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಚಿತ್ರೋದ್ಯಮದ ಮೌನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾಗುತಿತ್ತು. ಆದರೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು 49 ವರ್ಷದ ಸೈಫ್ ಅಲಿಖಾನ್ ಹೇಳಿದ್ದಾರೆ.

ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇನ್ನೂ ಸರಿಯಾಗಿ ತಿಳಿದಿಲ್ಲ. ಪ್ರತಿಭಟನೆ ಮಾಡಲು ಹೋಗಬೇಕಾದರೆ ಹೆಚ್ಚಿನ ರೀತಿಯಲ್ಲಿ ಚಿಂತಿಸಬೇಕಾದ ಅಗತ್ಯವಿದೆ. ಪತ್ರಿಕೆಯಲ್ಲಿ ಬಂದಂತಹ ಅನೇಕ ಸಂಗತಿಗಳು ಕಳವಳಕಾರಿಯಾಗಿವೆ. ಎಂತಹ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ ಎಂಬುದರ ಬಗ್ಗೆ ಅರಿಯಬೇಕಾಗಿದೆ  ಎಂದು ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com