ಖ್ಯಾತ ಹಿಂದಿ ನಟ ಕುಶಾಲ್ ಪಂಜಾಬಿ ಆತ್ಮಹತ್ಯೆ!

'ಇಷ್ಕ್ ಮೇ ಮಾರ್ಜವಾನ್' ಚಿತ್ರದಲ್ಲಿ ಕಡೆಯ ಬಾರಿಗೆ ಕಾಣಿಸಿಕೊಂಡಿದ್ದ ಖ್ಯಾತ ಸಿನಿಮಾ ಹಾಗೂ ಕಿರುತೆರೆ ನಟ ಕುಶಾಲ್ ಪಂಜಾಬಿ ಶವವಾಗಿ ಪತ್ತೆಯಾಗಿದ್ದಾರೆ. 37 ವರ್ಷದ ನಟ ಮುಂಬೈನ ಪಾಲಿ ಹಿಲ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ನಟನು ಬರೆದಿದ್ದೆನ್ನಲಾದ ಡೆತ್ ನೋಟ್ ಅನ್ನು ಪತ್ತೆಹಚ್ಚಿದ್ದಾರೆ./
ಕುಶಾಲ್ ಪಂಜಾಬಿ
ಕುಶಾಲ್ ಪಂಜಾಬಿ

ಇಷ್ಕ್ ಮೇ ಮಾರ್ಜವಾನ್' ಚಿತ್ರದಲ್ಲಿ ಕಡೆಯ ಬಾರಿಗೆ ಕಾಣಿಸಿಕೊಂಡಿದ್ದ ಖ್ಯಾತ ಸಿನಿಮಾ ಹಾಗೂ ಕಿರುತೆರೆ ನಟ ಕುಶಾಲ್ ಪಂಜಾಬಿ ಶವವಾಗಿ ಪತ್ತೆಯಾಗಿದ್ದಾರೆ. 37 ವರ್ಷದ ನಟ ಮುಂಬೈನ ಪಾಲಿ ಹಿಲ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ನಟನು ಬರೆದಿದ್ದೆನ್ನಲಾದ ಡೆತ್ ನೋಟ್ ಅನ್ನು ಪತ್ತೆಹಚ್ಚಿದ್ದಾರೆ.

ಸಧ್ಯ ನಟನ ಆತ್ಮಹತ್ಯೆ ಸಂಬಂಧ ಆಕ್ಸಿಡೆಂಟಲ್ ಡೆತ್ ರಿಪೋರ್ಟ್ (ಎಡಿಆರ್) ಸಲ್ಲಿಕೆಯಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಈ ನಡುವೆ ಮೃತ ನಟನ ಅಂತಿಮ ವಿಧಿ ವಿಧಾನಗಳು ಇಂದು ಸಂಜೆ 4 ಗಂಟೆಗೆ ಮುಂಬೈನಲ್ಲಿ ನಡೆಯಲಿದೆ.

ಕರಣ್ ಜೋಹರ್ ಹಾಗೂ  ಶಾರುಖ್ ಖಾನ್ ಅವರ ಜಂಟಿ ನಿರ್ಮಾಣವಾದ ಕಾಲ್" (2005) ಚಿತ್ರದಲ್ಲಿ ನಟ ಕುಶಾಲ್ ಜಾನ್ ಅಬ್ರಹಾಂ, ಅಜಯ್ ದೇವ್‌ಗನ್ ಮತ್ತು ವಿವೇಕ್ ಒಬೆರಾಯ್ ನಂತಹಾ ಖ್ಯಾತನಾಮರೊಡನೆ ತೆರೆ ಹಂಚಿಕೊಂಡಿದ್ದರು.

ಪಂಜಾಬಿ  ರೋಮ್ಯಾಂಟಿಕ್ ಕಾಮಿಡಿ  "ಸಲಾಮ್-ಎ-ಇಶ್ಕ್" ಮತ್ತು "ಧನ್ ಧನಾ ಧನ್ ಗೋಲ್" ನಲ್ಲಿ (2007) ಈ ನಟ ಪ್ರಮುಖ ಪಾತ್ರಧಾರಿಯಾಗಿದ್ದರು.ಇವುಗಳಲ್ಲಿ ಅಬ್ರಹಾಂ ಮತ್ತು ಅರ್ಷದ್ ವಾರ್ಸಿ ಸಹ ಅಭಿನಯಿಸಿದ್ದರು.ಅವರ ಕಿರುತೆರೆ ವೃತ್ತಿಜೀವನ  1995 ರಲ್ಲಿ "ಎ ಮೌತ್ಫುಲ್ ಆಫ್ ಸ್ಕೈ" ಯೊಂದಿಗೆ ಪ್ರಾರಂಭವಾಯಿತು ಮತ್ತು ವರ್ಷಗಳಲ್ಲಿ, ಪಂಜಾಬಿ ಜನಪ್ರಿಯ ಕಾರ್ಯಕ್ರಮಗಳಾದ "ಕಸಮ್ ಸೆ", "ಕುಕುಸಮ್", "ಡೆಖೋ ಮಗರ್ ಪ್ಯಾರ್ ಸೆ" ಮತ್ತು "ರಾಜಾ ಕಿ ಆಯೆಗಿ ಬರಾತ್" ಗಳಲ್ಲಿ ಅವರು ಕಾಣಿಸಿಕೊಂಡಿದ್ದರು."ಫಿಯರ್ ಫ್ಯಾಕ್ಟರ್", "ಮಿಸ್ಟರ್ & ಮಿಸ್ ಟಿವಿ", "ಪೈಸಾ ಭಾರಿ ಪಡೇಗಾ" ಮತ್ತು "ಝಲಕ್ ದಿಖ್ಲಾ ಜಾ" ನಂತಹ ಅನೇಕ ರಿಯಾಲಿಟಿ ಶೋಗಳಲ್ಲಿ ಪಂಜಾಬಿ ಕಾಣಿಸಿಕೊಂಡಿದ್ದಾರೆ.

2011 ರಲ್ಲಿ, ಅವರು ಶಾರುಖ್ ಖಾನ್ ಆತಿಥ್ಯ ವಹಿಸಿದ ರಿಯಾಲಿಟಿ ಗೇಮ್ ಶೋ "ಜೋರ್ ಕಾ ಝತ್ಕಾ: ಟೋಟಲ್ ವೈಪೌಟ್" ಅನ್ನು ಗೆದ್ದಿದ್ದರು. ಕುಶಾಲ್ ಅವರ ಸ್ನೇಹಿತ, ನಟ ಕರೋನ್ವೀರ್ ಭ್ರಾ ಕುಶಾಲ್ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com