ನಟಿ ಜಯಪ್ರದಾ ಆತ್ಮಹತ್ಯೆಗೆ ಪ್ರೇರೆಪಿಸಿದ್ದ ಕಟು ಘಟನೆಗಳಿವು!

ಹಿರಿಯ ನಟಿ ಕಮ್ ರಾಜಕಾರಿಣಿ ಜಯಪ್ರದಾ ಅವರು ಒಂದು ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದರಂತೆ. ಅದಕ್ಕೇನು ಕಾರಣ ಎಂಬುದನ್ನು ಅವರೇ ಹೇಳಿದ್ದಾರೆ.

Published: 01st February 2019 12:00 PM  |   Last Updated: 01st February 2019 10:47 AM   |  A+A-


Jaya Prada

ಜಯಪ್ರದಾ

Posted By : VS VS
Source : Online Desk
ಮುಂಬೈ: ಹಿರಿಯ ನಟಿ ಕಮ್ ರಾಜಕಾರಿಣಿ ಜಯಪ್ರದಾ ಅವರು ಒಂದು ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದರಂತೆ. ಅದಕ್ಕೇನು ಕಾರಣ ಎಂಬುದನ್ನು ಅವರೇ ಹೇಳಿದ್ದಾರೆ. 

ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಅವರನ್ನು ನನ್ನ ಗಾಡ್ ಫಾದರ್ ಎಂದೇ ಭಾವಿಸಿರುವೆ. ಆದರೆ ಜನರು ನನ್ನ ಮತ್ತು ಅಮರ್ ಸಿಂಗ್ ನಡುವೆ ಏನೋ ಇದೆ ಎಂದು ಮಾಡನಾಡಿಕೊಳ್ಳುತ್ತಿದ್ದರು. ನಾನು ಎಂದು ಅಮರ್ ಸಿಂಗ್ ಅವರಿಗೆ ರಾಖಿ ಕಟ್ಟಿದೆನೋ ಅಂದಿಗೆ ಮಾತುಕತೆ ನಿಂತಿತು. 

ಆದರೆ ಸಮಾಜವಾದಿ ಪಕ್ಷದ ಶಾಸಕ ಅಜಮ್ ಖಾನ್ ನನ್ನ ಮೇಲೆ ಆ್ಯಸಿಡ್ ದಾಳಿ ಮಾಡುವ ಸಂಚು ರೂಪಿಸಿದ್ದರು. ಒಟ್ಟಿನಲ್ಲಿ ಎಲ್ಲ ಕಡೆ ಹರಡಿದ್ದ ನೆಗೆಟಿವ್ ವಿಚಾರಗಳು ನನ್ನನ್ನು ಆತ್ಮಹತ್ಯೆ ಕಡೆ ತೆಗೆದುಕೊಂಡು ಹೋಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ನನಗೆ ಸಂಬಂಧಿಸಿದ ಕೆಲ ಎಡಿಟ್ ಮಾಡಿದ್ದ ಚಿತ್ರಗಳು ವೈರಲ್ ಆಗಿದ್ದವು. ನನ್ನ ಕ್ಷೇತ್ರದಲ್ಲಿಯೇ ನಾನು ತಲೆ ಎತ್ತಿ ಓಡಾಡದ ಸ್ಥಿತಿ ನಿರ್ಮಾಣವಾಗಿತ್ತು. ನಾನು ಸಂಪೂರ್ಣ ಕುಸಿದು ಹೋಗಿದ್ದೆ. ಆತ್ಮಹತ್ಯೆಯೊಂದೆ ಪರಿಹಾರ ಎಂದು ಭಾವಿಸಿದ್ದೆ. 

ಈ ಸಂದರ್ಭ ಅಮರ್ ಸಿಂಗ್ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಪಡೆದು ಹಿಂದಿರುಗಿದ ಸಿಂಗ್ ನನ್ನ ಜತೆಗೆ ನಿಂತಿದ್ದರು ಎಂದು ಹಳೆಯ ಘಟನೆಗಳನ್ನು ಜಯಪ್ರದಾ ಹೇಳಿದ್ದಾರೆ.
Stay up to date on all the latest ಬಾಲಿವುಡ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp