ಪ್ರಿಯಾಂಕಾ ಚೋಪ್ರಾ ಮೇಣದ ಪ್ರತಿಮೆ ನ್ಯೂಯಾರ್ಕ್ ನಲ್ಲಿ ಅನಾವರಣ

2016ರ ಎಮ್ಮಿ ಅವಾರ್ಡ್ ಸಮಾರಂಭದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೆಂಪು ...

Published: 08th February 2019 12:00 PM  |   Last Updated: 08th February 2019 02:59 AM   |  A+A-


Priyanka Chopra

ಪ್ರಿಯಾಂಕಾ ಚೋಪ್ರಾ

Posted By : SUD SUD
Source : Online Desk
2016ರ ಎಮ್ಮಿ ಅವಾರ್ಡ್ ಸಮಾರಂಭದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೆಂಪು ಬಣ್ಣದ ಗೌನ್ ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಅದೇ ಬಣ್ಣದ ಧಿರಿಸಿನ ಅವರ ಮೇಣದ ಪ್ರತಿಮೆ ನ್ಯೂಯಾರ್ಕ್ ನಲ್ಲಿ ಸ್ಥಾಪಿತವಾಗಿದೆ. ಪ್ರಿಯಾಂಕಾ ಅವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಇದರ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೇವಲ ನ್ಯೂಯಾರ್ಕ ಅಲ್ಲದೆ ಪ್ರಿಯಾಂಕಾ ಅವರ ಮೇಣದ ಪ್ರತಿಮೆ ಇನ್ನು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಏಷ್ಯಾಗಳಲ್ಲಿ ಕೂಡ ಬರಲಿದೆ.

ಮೇಡಂ ಟುಸ್ಸಾಡ್ ನಲ್ಲಿ ಪ್ರಿಯಾಂಕಾ ಅವರ ಮೊದಲ ಮೇಣದ ಪ್ರತಿಮೆಯಿದು. ಈಗಾಗಲೇ ಅಲ್ಲಿ ಕರೀನಾ ಕಪೂರ್, ಸಲ್ಮಾನ್ ಖಾನ್, ಶಾರೂಕ್ ಖಾನ್, ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಮೊದಲಾದವರ ಮೇಣದ ಪ್ರತಿಕೃತಿಗಳು ಬಂದಿವೆ. ಮೇಡಂ ಟುಸ್ಸಾಡ್ ನ ದೆಹಲಿ ಶಾಖೆಯಲ್ಲಿ ಕೂಡ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಪ್ರತಿಕೃತಿಗಳಿವೆ.

ಪ್ರಿಯಾಂಕಾ ಅವರು ತಮ್ಮ ಮುಂದಿನ ಚಿತ್ರ ಇಸ್ ನಾಟ್ ಇಟ್ ರೊಮ್ಯಾಂಟಿಕ್ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ.
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp