ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸೇರಿ ನಾಲ್ವರ ವಿರುದ್ಧ ವಂಚನೆ ಕೇಸ್ ದಾಖಲು

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸೇರಿದಂತೆ ನಾಲ್ವರ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ. 37 ಲಕ್ಷ ರೂ. ವಂಚನೆ ಪ್ರಕರಣವನ್ನು ದೀಪಕ್ ಎನ್ನವವರು ಸೋನಾಕ್ಷಿ ...

Published: 24th February 2019 12:00 PM  |   Last Updated: 24th February 2019 01:01 AM   |  A+A-


Sonakshi Sinha,

ಸೋನಾಕ್ಷಿ ಸಿನ್ಹಾ

Posted By : SD SD
Source : ANI
ಮೊರದಾಬಾದ್: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ  ಸೇರಿದಂತೆ ನಾಲ್ವರ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ.  37 ಲಕ್ಷ ರೂ. ವಂಚನೆ ಪ್ರಕರಣವನ್ನು ದೀಪಕ್ ಎನ್ನವವರು ಸೋನಾಕ್ಷಿ ಸೇರಿದಂತೆ 7 ಮಂದಿಯ ಮೇಲೆ ದಾಖಲಿಸಿದ್ದಾರೆ.

ಈ ಮೊದಲು ದೂರು ಕೊಟ್ಟಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲವಂತೆ. ಆದರೆ, ಯಾವಾಗ ದೂರು ಕೊಟ್ಟ ದೀಪಕ ಅವರು ವಿಷ ಸೇವಿಸ ಆತ್ಮಹತ್ಯೆಗೆ ಪ್ರಯತ್ನಿಸಿದರೋ ಆಗ ಪೊಲೀಸರು ಸೋನಾಕ್ಷಿ ಹಾಗೂ ಇತರರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರಂತೆ. 

ಕಳೆದ ವರ್ಷ, ಸೆಪ್ಟೆಂಬರ್ 30, 2018ರಂದು ಸೋನಾಕ್ಷಿ ಸಿನ್ಹಾ ಕಾರ್ಯಕ್ರಮವೊಂದಕ್ಕೆ ಸೆಲೆಬ್ರಟಿಯಾಗಿ ಬರಬೇಕಿತ್ತು. ಕಂಪನಿಯೊಂದರ ಜೊತೆ ದೀಪಕ್ ಒಪ್ಪಂದ ಮಾಡಿಕೊಂಡಿದ್ದರು. ಆ ಕಂಪನಿ ಮಾಲೀಕರು ಸೋನಾಕ್ಷಿ ಜೊತೆ ಮಾತುಕತೆ ನಡೆಸಿ ಕಾರ್ಯಕ್ರಮಕ್ಕೆ ಆಗಿಸುವ ಬಗ್ಗೆ ಸೋನಾಕ್ಷಿ ವೀಡಿಯೋ ಒಂದನ್ನು ಕೂಡ ಪೋಸ್ಟ್ ಮಾಡಿದ್ದರು. 

ಒಪ್ಪಂದದಂತೆ 37 ಲಕ್ಷ ರೂ. ಗಳನ್ನು ಕಂಪನಿ ಸೋನಾಕ್ಷಿ ಸಿನ್ಹಾ ಅವರ ಖಾತೆಗೆ ಹಾಕಲಾಗಿತ್ತು. ಸೋನಾಕ್ಷಿ ಆ ಕಾರ್ಯಕ್ರಮಕ್ಕೆ ಬರಲೇ ಇಲ್ಲ. ಇದ್ರಿಂದ ಸಾಕಷ್ಟು ಗಲಾಟೆಯಾಗಿತ್ತು. ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದ ದೀಪಕ್ ಸೋನಾಕ್ಷಿ ಬಳಿ ಕೊಟ್ಟ ಹಣವನ್ನು ವಾಪಸ್ ಕೇಳಿದ್ದರು. ಆದರೆ ಹಣ ಬಂದಿರಲಿಲ್ಲ.  ಬಳಿಕ 3 ತಿಂಗಳ ಹಿಂದೆ ಈ ಬಗ್ಗೆ ದೀಪಕ್ ದೂರು ನೀಡಿದ್ದರು.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp