ಸೆಲ್ಫಿ ಬೇಬೋ ಖ್ಯಾತಿಯ ಆಲ್ಬಂ ನಟಿ ಮೃತದೇಹ ಪತ್ತೆ!

ಸೆಲ್ಫಿ ಬೇಬೋ ಎಂದೇ ಖ್ಯಾತರಾಗಿರುವ ಆಲ್ಬಂ ನಟಿಯ ಮೃತ ದೇಹ ನದಿ ಸೇತುವೆಯೊಂದರ ಕೆಳಗೆ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸಿಮ್ರಾನ್ ಸಿಂಗ್
ಸಿಮ್ರಾನ್ ಸಿಂಗ್
ಸಂಬಲ್ಪುರ: ಸೆಲ್ಫಿ ಬೇಬೋ ಎಂದೇ ಖ್ಯಾತರಾಗಿರುವ ಆಲ್ಬಂ ನಟಿಯ ಮೃತ ದೇಹ ನದಿ ಸೇತುವೆಯೊಂದರ ಕೆಳಗೆ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 
ಒಡಿಶಾದ ಸಂಬಲ್ಪುರದ ಜಿಲ್ಲೆಯ ಮಹಾನದಿ ಬ್ರಿಡ್ಜ್ ಬಳಿ ಆಲ್ಬಂ ನಟಿ ಸಿಮ್ರಾನ್ ಸಿಂಗ್ ಅವರು ಮೃತದೇಹ ಪತ್ತೆಯಾಗಿದೆ.
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ನಟಿಯ ಮುಖದ ಮೇಲೆ ಕೆಲ ಗಾಯದ ಗುರುತುಗಳ ಕೂಡ ಪತ್ತೆಯಾಗಿದ್ದು ಆಕೆ ಬಳಸುತ್ತಿದ್ದ ಬ್ಯಾಗ್ ಕೂಡ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ನಟಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com