33ನೇ ಹುಟ್ಟು ಹಬ್ಬಕ್ಕೆ ದೀಪಿಕಾ ವೆಬ್ ​ಸೈಟ್​​ ಲಾಂಚ್, ಕೆಲವೇ ಹೊತ್ತಲ್ಲಿ ಕ್ರ್ಯಾಶ್​!

ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಮೊದಲ ಬಾರಿಗೆ ಹುಟ್ಟು ಹಬ್ಬ...

Published: 06th January 2019 12:00 PM  |   Last Updated: 06th January 2019 01:12 AM   |  A+A-


Happy Birthday Deepika Padukone, 'Mastani' turns 33 and launches her own website

ದೀಪಿಕಾ ಪಡುಕೋಣೆ

Posted By : LSB LSB
Source : Online Desk
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಮೊದಲ ಬಾರಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಕನ್ನಡದ ಬೆಡಗಿ, ಬಾಲಿವುಡ್ ನಟಿ​ ದೀಪಿಕಾ ಪಡುಕೋಣೆ ತಮ್ಮ ಅಭಿಮಾನಿಗಳಿಗೆ ಗಿಫ್ಟ್ ವೊಂದನ್ನು​ ನೀಡಿದ್ದಾರೆ.

ಶನಿವಾರ 33ನೇ ಹುಟ್ಟು ಹಬ್ಬ ಆಚರಿಸಿಕೊಂಡ ದೀಪಿಕಾ, ತನ್ನ ಅಭಿಮಾನಿಗಳಿಗಾಗಿ ತನ್ನದೇ ವೆಬ್ ಸೈಟ್ ಗೆ ಚಾಲನೆ ನೀಡಿದ್ದಾರೆ. www.deepikapadukone.com ವೆಬ್ ಸೈಟ್ ಲಾಂಚ್ ಆದ ಕೆಲವೇ ಹೊತ್ತಲ್ಲಿ ಕ್ರ್ಯಾಶ್ ಆಗಿದೆ.

ದೀಪಿಕಾಗೆ ಅಪಾರ ಸಂಖ್ಯೆಯ ಅಭಿಮಾನಿಗಳಿರುವುದರಿಂದ ವೆಬ್​ಸೈಟ್​ ಕ್ರ್ಯಾಶ್​ ಆಗಿದ್ದರಲ್ಲಿ ಆಶ್ಚರ್ಯವಿಲ್ಲ. ಈ ವೆಬ್​ಸೈಟ್​​ನಲ್ಲಿ ದೀಪಿಕಾ ಅವರ ಜೀವನ, ಸಿನಿಮಾಗಳು ಹಾಗೂ ಅವಾರ್ಡ್​​ಗಳ ಬಗ್ಗೆ ಮಾಹಿತಿ ಪಡೆಯಬಹುದು. ಹಾಗೇ ದೀಪಿಕಾ ಫೋಟೋ​​ಗಳನ್ನ ನೋಡಬಹುದಾಗಿದೆ.

ನಿನ್ನೆಯಷ್ಟೇ  ನಾಳೆ ಒಂದು ಮುಖ್ಯವಾದ ವಿಷಯ ಹೇಳುತ್ತೇನೆ ಕಾಯ್ತಾ ಇರಿ ಅಂತ ಇನ್ಸ್​​ಟಾಗ್ರಾಂನಲ್ಲಿ ಹೇಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದರು. 

ಹಲವರು ದೀಪಿಕಾರ ಮುಂಬರುವ ಚಿತ್ರ ಚಪಕ್​ನ ಫಸ್ಟ್​ ಲುಕ್​ ರಿಲೀಸ್​ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇಂದು ಆ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ. ದೀಪಿಕಾ ಪಡುಕೋಣೆ ತಮ್ಮ ವೆಬ್​ಸೈಟ್​​ ಲೋಕಾರ್ಪಣೆ ಮಾಡಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp