ರಾಕೇಶ್ ರೋಷನ್ ಗುಣಮುಖರಾಗುವಂತೆ ಪ್ರಧಾನಿ ಮೋದಿ ಪ್ರಾರ್ಥನೆ

ಬಾಲಿವುಡ್ ಹಿರಿಯ ನಿರ್ದೇಶಕ ಹಾಗೂ ನಟ ಹೃತ್ತಿಕ್ ರೋಷನ್ ತಂದೆ ರಾಕೇಶ್ ರೋಷನ್‌ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ, ರಾಕೇಶ್ ರೋಷನ್, ಹೃತ್ತಿಕ್ ರೋಷನ್
ಪ್ರಧಾನಿ ಮೋದಿ, ರಾಕೇಶ್ ರೋಷನ್, ಹೃತ್ತಿಕ್ ರೋಷನ್
ನವದೆಹಲಿ:  ಬಾಲಿವುಡ್   ಹಿರಿಯ  ನಿರ್ದೇಶಕ ಹಾಗೂ ನಟ ಹೃತ್ತಿಕ್ ರೋಷನ್ ತಂದೆ  ರಾಕೇಶ್ ರೋಷನ್‌ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ರಾಕೇಶ್ ರೋಷನ್ ಅವರಿಗೆ ಸ್ಕ್ವಾಮಸ್ ಸೆಲ್‌ ಕಾರ್ಸಿನೋಮ ( ಕ್ಯಾನ್ಸರ್) ಇರುವ ಸಂಗತಿಯನ್ನು  ಹೃತಿಕ್ ರೋಷನ್ ಸಾಮಾಜಿಕ ಜಾಲತಾಣದಲ್ಲಿ ವಿನಿಮಯ ಮಾಡಿಕೊಂಡ ಕೆಲ ತಾಸುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ರಾಕೇಶ್ ರೋಷನ್ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.
ಹೃತಿಕ್ ರೋಷನ್  ಪೋಸ್ಟ್ ಮಾಡಿದ ಕೆಲ ತಾಸುಗಳಲ್ಲಿಯೇ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು,ರಾಕೇಶ್ ರೋಷನ್  ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಅವರೊಬ್ಬರು ಹೋರಾಟಗಾರರಾಗಿದ್ದು, ಈ ಸವಾಲನ್ನು ಧೈರ್ಯದಿಂದ ಎದುರಿಸಲಿದ್ದಾರೆ ಎಂದು  ಹೃತ್ತಿಕ್ ರೋಷನ್ ಗೆ ಧೈರ್ಯ ತುಂಬಿದ್ದಾರೆ. ಮೋದಿ ಅವರ ಟ್ವೀಟ್ ಗೆ ಹೃತ್ತಿಕ್ ರೋಷನ್  ಪ್ರತಿ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com