'ಜಬ್ ವಿ ಮೆಟ್ 'ಖ್ಯಾತಿಯ ಹಿರಿಯ ನಟ ಕಿಶೋರ್ ಪ್ರಧಾನ್ ನಿಧನ

ಜಬ್ ವಿ ಮೆಟ್", "ಲಗೇ ರಹೋ ಮುನ್ನಾ ಭಾಯಿ" ಖ್ಯಾತಿಯ ಬಾಲಿವುಡ್ ಹಿರಿಯ ನಟ ಕಿಶೋರ್ ಪ್ರಧಾನ್ (86) ನಿಧನರಾದರು.
ಕಿಶೋರ್ ಪ್ರಧಾನ್
ಕಿಶೋರ್ ಪ್ರಧಾನ್
ಮುಂಬೈ: "ಜಬ್ ವಿ ಮೆಟ್", "ಲಗೇ ರಹೋ ಮುನ್ನಾ ಭಾಯಿ" ಖ್ಯಾತಿಯ ಬಾಲಿವುಡ್ ಹಿರಿಯ ನಟ ಕಿಶೋರ್ ಪ್ರಧಾನ್ (86) ನಿಧನರಾದರು. ಮರಾಠಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅವರ ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಚ್ಚು ಜನಪ್ರಿಯತೆ ವ್ಯಕ್ತವಾಗಿತ್ತು.
ಹಲವು ದಿನಗಳಿಂದ ನಆರೋಗ್ಯಕ್ಕೀಡಾಗಿದ್ದ ಕಿಶೋರ್ ವಯೋಸಹಜ ಖಾಯಿಲೆಯಿಂದಾಗಿ ಅಸುನೀಗಿದ್ದಾರೆ.
ಪ್ರಸಿದ್ಧ ಮರಾಠಿ ಬರಹಗಾರ ಮತ್ತು ಕವಿ ಚಂದ್ರಶೇಖರ್ ಗೋಖಲೆ ಸಹ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕಿಶೋರ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಮರಾಠಿ ಚಿತ್ರ "ಶುಭ ಲಗ್ನ ಸಾವಧಾನ್" ಚಿತ್ರದಲ್ಲಿ ಕಿಶೋರ್ ಪ್ರಧಾನ್ ಕಡೆಯದಾಗಿ ಅಭಿನಯಿಸಿದ್ದರು. ಅಲ್ಲದೆ 100 ಕ್ಕೂ ಹೆಚ್ಚು ಮರಾಠಿ ಟಕಗಳಲ್ಲಿ ಮತ್ತು 18 ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದ ಕಿಶೋರ್ ಪ್ರಧಾನ್ ''ಜಬ್ ವಿ ಮೆಟ್'', ''ಲಗೇ ರಹೋ ಮುನ್ನಾಭಾಯಿ'', ''ಶುಭ್‌ ಲಗ್ನ ಸಾವ್‌ಧಾನ್‌'' ''ಮಿ ಶಿವಾಜಿ ರಾಜೇ ಭೋಸ್ಲೆ ಬೋಲ್ತೋಯ್'' ಮೊದಲಾದ ಚಿತ್ರದಲ್ಲಿನ ಅಭಿನಯದಿಂದ ಚಿತ್ರಪ್ರೇಮಿಗಳ ಮನಸೂರೆಗೊಂಡಿದ್ದರು. ಜಾನಿ ವಾಕರ್ ಹಾಗೂ ಜಗದೀಪ್‌ರನ್ನು ಮಿಮಿಕ್ರಿ ಯನ್ನು ಕಿಶೋರ್ ಚೆನ್ನಾಗಿ ಮಾಡುತ್ತಿದ್ದರು.
"ಶುಭ ಲಗ್ನ ಸಾವಧಾನ್" ನಲ್ಲಿ ಕಿಶೋರ್ ಜತೆ ಅಭಿನಯಿಸಿದ್ದ ನಟ ಸುಬೋಧ್‌ ಭಾವೆ ಕಿಶೋರ್ ಅವರನ್ನು ಈ ಚಿತ್ರದ ಶೂಟಿಂಗ್ ಬಳಿಕ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಅವರು ಅನಾರೋಗ್ಯಕ್ಕೀಡಾದ ಸುದ್ದಿ ತಿಳಿದಿತ್ತು. ಆದರೆ ಶೂಟಿಂಗ್ ಕಾರಣಕ್ಕೆ ಭೇಟಿ ಆಗಲು ಸಮಯ ಸಿಕ್ಕಿರಲಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com