ಡಿಸೆಂಬರ್ 31, 2015 ರಂದು ನಟ ವಿಶಾಲ್ ತಮ್ಮ ತಾಯಿ ದುರ್ಗಾ ಅವರಿಗೆ ಚಿತ್ರಮಂದಿರದಲ್ಲಿ Star Wars: The Force Awakens ಚಿತ್ರ ವೀಕ್ಷಣೆ ಮಾಡಲು ಹೇಳಿದ್ದಾರೆ. ಆಕೆ ಅದಕ್ಕೆ ಒಪ್ಪಿರಲಿಲ್ಲ. ಆತ ತಾಯಿಯಿಂದ 500 ರು. ಪಡೆದು ಮುಂಬೈ ಫ್ಲ್ಯಾಟ್ ನಿಂದ ಹೊರಬಿದ್ದಿದ್ದ. ಅದಾಗಿ ಮದ್ಯರಾತ್ರಿ 1 ಗಂಟೆ ಸುಮಾರಿಗೆ ನಟ ತಮ್ಮ ತಂದೆ, ಉದ್ಯಮಿ ಮಹೇಂದ್ರ ಅವರಿಗೆ ಸಂದೇಶ ಕಳಿಸಿ "ತಾನು ಪಾರ್ಟಿಗೆ ಹೋಗುತ್ತಿದ್ದೇನೆ, ನಾಳೆ ಸಿಗೋಣ" ಎಂದು ಹೇಳಿದ್ದಾನೆ. ಇದು ಆತ ನ ಕಡೆಯ ಸಂದೇಶವಾಗಿದ್ದು ಅಂದಿನಿಂದ ಆ ನಟ ಎಲ್ಲಿದ್ದಾನೆನ್ನುವುದು ತಿಳಿದಿಲ್ಲ.