ಪೈರಸಿ ಮೇಲೂ 'ಸರ್ಜಿಕಲ್ ಸ್ಟ್ರೈಕ್'..!, 3.8 ಜಿಬಿ ಡಾಟಾದ ಉರಿ ಸಿನಿಮಾ ಡೌನ್ಲೋಡ್ ಮಾಡಿದವರಿಗೆ ಸಿಕ್ಕಿದ್ದೇನು?

ಇಡೀ ಭಾರತೀಯ ಚಿತ್ರರಂಗವನ್ನು ದಶಕಗಳಿಂದಲೂ ಕಾಡುತ್ತಿರುವ ಪೈರಸಿ ಭೂತಕ್ಕೆ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರ ತಂಡ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದು, ಆನ್ ಲೈನ್ ನಲ್ಲಿ 3.8 ಜಿಬಿ ಡಾಟಾದ ಚಿತ್ರ ಡೌನ್ಲೋಡ್ ಮಾಡಿದ್ದ ಮಂದಿ ಬೇಸ್ತು ಬಿದ್ದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಇಡೀ ಭಾರತೀಯ ಚಿತ್ರರಂಗವನ್ನು ದಶಕಗಳಿಂದಲೂ ಕಾಡುತ್ತಿರುವ ಪೈರಸಿ ಭೂತಕ್ಕೆ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರ ತಂಡ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದು, ಆನ್ ಲೈನ್ ನಲ್ಲಿ 3.8 ಜಿಬಿ ಡಾಟಾದ ಚಿತ್ರ ಡೌನ್ಲೋಡ್ ಮಾಡಿದ್ದ ಮಂದಿ ಬೇಸ್ತು ಬಿದ್ದಿದ್ದಾರೆ.
ಹೌದು.. ಉರಿ ಸೆಕ್ಟರ್ ನಲ್ಲಿ ಭಾರತೀಯ ಸೇನೆ ಮೇಲೆ ನಡೆದಿದ್ದ ದಾಳಿಗೆ ಪ್ರತೀಕವಾಗಿ ಸೈನಿಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಹತ್ತಾರು ಉಗ್ರರ ಹತ್ಯೆಗೈದಿದ್ದರು. ಇದೇ ಕಥಾ ಹಂದರವನ್ನೊಳಗೊಂಡ ಚಿತ್ರ ಉರಿ ದಿ ಸರ್ಜಿಕಲ್ ಸ್ಚ್ರೈಕ್ ಇತ್ತೀಚೆಗೆ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ಚಿತ್ರಕ್ಕೂ ಪೈರಸಿ ಭೂತ ಕಾಡಿದ್ದು. ಇದಕ್ಕೆ ಪ್ರತೀಕವಾಗಿ ಚಿತ್ರ ತಂಡವೇ ಸುಮಾರು 3.8 ಜಿಬಿ ಡಾಟಾದ ಫೈಲ್ ವೊಂದನ್ನು ಟೊರೆಂಟ್ ವೆಬ್ ಸೈಟ್ ಗಳಿಗೆ ಅಪ್ಲೋಡ್ ಮಾಡಿ ಪೈರಸಿದಾರರಿಗೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದೆ.
ಸಿನಿಮಾ ರಿಲೀಸ್​ ಆಗಿ ಒಂದು ದಿನವೂ ಕಳೆದಿರಲ್ಲ, ಆಗಲೇ ಪೈರಸಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದಕ್ಕೆ ಉರಿ- ದಿ ಸರ್ಜಿಕಲ್​​ ಸ್ಟ್ರೈಕ್​​ ಚಿತ್ರತಂಡ ಸೂಪರ್​ ಪ್ಲಾನ್ ವೊಂದನ್ನ ಕಂಡುಕೊಂಡಿದೆ. ಪೈರಸಿ ವಿರುದ್ಧವೇ ಉರಿ ಚಿತ್ರತಂಡ ‘ಸರ್ಜಿಕಲ್​​ ಸ್ಟ್ರೈಕ್’​ ಮಾಡಿದ್ದು, ಉರಿ ಚಿತ್ರವೆಂದುಕೊಂಡು 3.8 ಜಿಬಿ ಫೈಲ್ ಡೌನ್ಲೋಡ್ ಮಾಡಿದ್ದ ಮಂದಿ ಬೇಸ್ತು ಬಿದ್ದಿದ್ದಾರೆ.
ಟೊರೆಂಟ್​​ ವೆಬ್ ಸೈಟ್​​ಗಳ ಮೂಲಕ ಉರಿ ಚಿತ್ರ ಡೌನ್​ಲೋಡ್​ ಮಾಡಲು ಯತ್ನಿಸುವವರಿಗೆ ಚಿತ್ರತಂಡ ಮಾಸ್ಟರ್​ ಸ್ಟ್ರೋಕ್​ ನೀಡಿದ್ದು, ಸ್ವತಃ ಚಿತ್ರತಂಡವೇ ಪೂರ್ತಿ ಸಿನಿಮಾವನ್ನ ವೆಬ್​​ಸೈಟ್ ನಲ್ಲಿ ಹಾಕಿದೆ. ಆದ್ರೆ ಇಲ್ಲೊಂದು ಟ್ವಿಸ್ಟ್​ ಇದೆ. ಈ ವಿಡಿಯೋದಲ್ಲಿರೋದು ಅಸಲಿ ಸಿನಿಮಾ ಅಲ್ಲ. ಬದಲಾಗಿ ಚಿತ್ರದಲ್ಲಿ ನಟಿಸಿರೋ ವಿಕ್ಕಿ ಕೌಶಲ್​​, ಯಾಮಿ ಗೌತಮ್​​​ ಹಾಗೂ ಇತರರು ಪೈರಸಿ ವಿರುದ್ಧ ನೀಡಿರೋ ಸಂದೇಶ ಇದರಲ್ಲಿದೆ. ಉರಿ ಸಿನಿಮಾ ಅಂತ ಅಂದುಕೊಂಡು ಸುಮಾರು 3.8 ಜಿಬಿಯಷ್ಟು ದೊಡ್ಡದಾದ ಫೈಲ್​​ ಡೌನ್​ ಲೋಡ್​ ಮಾಡಿದವರಿಗೆ ಇದರಿಂದ ಶಾಕ್​ ಆಗಿದೆ.
ವಿಡಿಯೋ ಪ್ಲೇ ಆದ ತಕ್ಷಣ ಥಿಯೇಟರ್​ನಲ್ಲಿ ಪ್ರೇಕ್ಷಕರ ಧ್ವನಿ ಕೇಳಿಸುತ್ತೆ. ಸೆನ್ಸಾರ್​ ಬೋರ್ಡ್​ ಸರ್ಟಿಫಿಕೇಟ್​​ ಹಾಗೂ ಟೈಟಲ್​ ಕಾರ್ಡ್​​ ಬರುತ್ತಿದ್ದಂತೆ ಕ್ಯಾಮೆರಾ ಶೇಕ್​ ಆಗುತ್ತೆ. ಲೊಕೇಷನ್​​: ಅನ್ ಡಿಸ್​​ಕ್ಲೋಸ್ಡ್​​, ಟೈಮ್​: ಸರ್ಜಿಕಲ್​ ಸ್ಟ್ರೈಕ್​ಗೆ 36 ಗಂಟೆಗಳ ಮುಂಚೆ ಎಂಬ ದೃಶ್ಯ ಬರುತ್ತದೆ. ಚಿತ್ರದ ನಾಯಕ ವಿಶಾಲ್​ ಕೌಶಲ್​, ಯಾಮಿ ಗೌತಮ್​ ಹಾಗೂ ಇತರರು ಯಾವ ರೀತಿ ಸರ್ಜಿಕಲ್​ ಸ್ಟ್ರೈಕ್​ ಮಾಡಬೇಕು ಅಂತ ಚರ್ಚಿಸುತ್ತಿರುತ್ತಾರೆ. ಇಲ್ಲಿಂದ ಶುರುವಾಗುತ್ತೆ ನೋಡಿ ಟ್ವಿಸ್ಟ್​.
ಇದ್ದಕ್ಕಿದ್ದಂತೆ ನಟ ವಿಕ್ಕಿ ಕ್ಯಾಮೆರಾ ಕಡೆ ತಿರುಗಿ, ಸೇನಾಪಡೆಯ ರೀತಿಯಲ್ಲೇ ನಾವು ಕೂಡ ನಿಮಗೆ ಅರಿವಿಲ್ಲದಂತೆ ಸ್ಕ್ರೀನ್​​ ಮೇಲೆ ಬಂದಿದ್ದೇವೆ ಎನ್ನುತ್ತಾರೆ, ಬಳಿಕ ನಟಿ ಯಾಮಿ ಗೌತಮ್​ ಮಾತನಾಡಿ, ನಮ್ಮ ಸೇನೆ ಮತ್ತೊಂದು ದೇಶದೊಳಗೆ ನುಗ್ಗಿ ಅವರ ಮೇಲೆ ದಾಳಿ ಮಾಡಬಹುದು ಎಂದಾದ್ರೆ, ಟೊರೆಂಟ್​ ವಿರುದ್ಧವೂ ಮಾಡಬಹುದು ಎಂದು ಹೇಳ್ತಾರೆ. ಈ ಸಿನಿಮಾವನ್ನ ಅಕ್ರಮವಾಗಿ ಡೌನ್ಲೋಡ್​​ ಮಾಡಿಕೊಂಡು ಸೀಕ್ರೆಟ್​ ಆಗಿ ನೋಡೋ ಬದಲು ಹೆಮ್ಮೆಯಿಂದ ಥೀಯೆಟರ್​​ನಲ್ಲಿ ನೋಡಿ ಎಂದು ವಿಕ್ಕಿ ಮನವಿ ಮಾಡುತ್ತಾರೆ. ಅಲ್ಲದೆ ಸಿನಿಮಾದ ಡೈಲಾಗ್ ಅನ್ನೂ ಕೂಡ ಇಲ್ಲಿ ಹೇಳುವ ವಿಕ್ಕಿ 'ಇದು ಹೊಸ ಭಾರತ, ಗಡಿಯೊಳಗೂ ನುಗ್ಗುತ್ತೇವೆ, ಶತೃಗಳನ್ನೂ ಹೊಡೆದು ಹಾಕುತ್ತೇವೆ ಅನ್ನೋ ಚಿತ್ರದ ಟ್ಯಾಗ್​ ಲೈನ್​​​ ಅನ್ನೇ ಇಲ್ಲೂ ಹೇಳ್ತಾರೆ. ಅಲ್ಲಿಗೆ ಥಿಯೇಟರ್ ಗೆ ಹೋಗದೆ ಮೊಬೈಲ್ ನಲ್ಲೇ ಸಿನಿಮಾ ನೋಡಬಹುದು ಅಂದುಕೊಳ್ಳೋರಿಗೆ ಮಾಸ್ಟರ್​​ ಸ್ಟ್ರೋಕ್​ ನೀಡಿದಂತಾಗಿದೆ.
ಉರಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ಸಿಕ್ತಿದ್ದು, 5 ದಿನಗಳಲ್ಲಿ ರೂ55 ಕೋಟಿ ಗಳಿಸಿದೆ. ಆದಿತ್ಯ ಧರ್​ ಹಾಗೂ ರೋನಿ ಸ್ಕ್ರೀವಾಲಾ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. 2016ರ ಸೆಪ್ಟೆಂಬರ್​​ನಲ್ಲಿ ಜಮ್ಮು ಕಾಶ್ಮೀರದ ಉರಿಯಲ್ಲಿ ಶಂಕಿತ ಉಗ್ರರಿಂದ ದಾಳಿ ನಡೆದ ಬೆನ್ನಲ್ಲೇ, ಪಾಕ್​​ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಸರ್ಜಿಕಲ್​ ಸ್ಟ್ರೈಕ್​​​ ನಡೆಸಿತ್ತು. ಈ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com