ಕರೀನಾ ಕಪೂರ್ ಖಾನ್
ಕರೀನಾ ಕಪೂರ್ ಖಾನ್

ನಾನು ರಾಜಕೀಯ ಮಾಡಲ್ಲ, ಚಿತ್ರರಂಗವೇ ನನಗೆಲ್ಲಾ: ಕರೀನಾ ಕಪೂರ್ ಖಾನ್ ಸ್ಪಷ್ಟನೆ

ಮುಂದಿನ ಲೋಕಸಭೆ ಚುನಾವಣೆಗೆ ಬಾಲಿವುಡ್ ಖ್ಯತ ನಟಿ ಕರೀನಾ ಕಪೂರ್ ಖಾನ್ ಸ್ಪರ್ಧಿಸುತ್ತಿದ್ದಾರೆಯೆ, ಇಲ್ಲವೆ ಎಂಬ ಊಹಾಪೋಹಗಳಿಗೆ ನಟಿ ಕರೀನಾ ಸೋಮವಾರ ತೆರೆ ಎಳೆದಿದ್ದಾರೆ.
ಮುಂಬೈ: ಮುಂದಿನ ಲೋಕಸಭೆ ಚುನಾವಣೆಗೆ ಬಾಲಿವುಡ್ ಖ್ಯತ ನಟಿ ಕರೀನಾ ಕಪೂರ್ ಖಾನ್ ಸ್ಪರ್ಧಿಸುತ್ತಿದ್ದಾರೆಯೆ, ಇಲ್ಲವೆ  ಎಂಬ ಊಹಾಪೋಹಗಳಿಗೆ ನಟಿ ಕರೀನಾ ಸೋಮವಾರ ತೆರೆ ಎಳೆದಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕರೀನಾ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ನಟಿ "ನಾನು ರಾಜಕೀಯ ಪ್ರವೇಶಿಸಲಾರೆ, ನನ್ನ ಗುರಿ ಏನಿದ್ದರೂ ಕೇವಲ ಚಿತ್ರರಂಗದಲ್ಲಿ ಹೆಸರು ಗಳಿಸುವುದಷ್ಟೆ" ಎನ್ನುವ ಮೂಲಕ ತಮ್ಮ ಬಗೆಗಿನ ಗಾಸಿಪ್ ಗಳಿಗೆ ಸ್ಪಷ್ಟನೆ ನೀಡಿದ್ದಾರೆ.
"ನಾನು ಸಿನಿಮಾದಲ್ಲಿ ನಟಿಸುವ ಬಗ್ಗೆ ಯಾವಾಗಲೂ ಯೋಚಿಸುತ್ತೇನೆ.ನಾನು ರಾಜಕೀಯ ಸೇರುವ ಯಾವ ಆಲೋಚನೆ ಇಲ್ಲ. ಈ ವರದಿಗಳಿಗೆ ಆಧಾರವಿಲ್ಲ.ತನ್ನ ಆದ್ಯತೆ ಕೇವಲ ಚಿತ್ರರಂಗವೇ ಆಗಿದೆ."
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ಕಾರ್ಪೊರೇಟರ್ ಯೋಗೇಂದ್ರ ಸಿಂಗ್ ಚೌಹಾಣ್ ಅವರು ಭೋಪಾಲ್ ಕ್ಷೇತ್ರದಿಂಡ ಕರೀನಾ ಅವರನ್ನು ಕಣಕ್ಕಿಳಿಸಬೇಕು. ಇದರಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಸುಲಭವಾಗಲಿದೆ ಎಂದು ವಿವರಿಸಿದ್ದರು
ಕರೀನಾ ಅವರಿಗೆ ಪಕ್ಷದ ಟಿಕೆಟ್ ನೀಡುವಂತೆ ಮನವೊಲಿಸಲು ಚೌಹಾಣ್ ಅವರು ಮುಖ್ಯಮಂತ್ರಿ ಕಮಲ್ ನಾಥ್ ಜತೆ ಚರ್ಚಿಸಲಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಸೈಫ್ ಅಲಿ ಖಾನ್ ಪತ್ನಿ ಕರೀನಾ ತಾವು ರಾಜಕೀಯ ಪ್ರವೇಶಿಸುವುದನ್ನು ಸ್ಪಷ್ಟ ಮಾತಿನಲ್ಲಿ ಅಲ್ಲಗೆಳೆದಿದ್ದಾರೆ.
ಇನ್ನು ಈ ಕುರಿತಂತೆ ಪ್ರತಿಕ್ರಯಿಸಿರುವ ಕೇಸರಿ ಪಕ್ಷ "ಭೋಪಾಲ್ ನಲ್ಲಿ ನಮಗೆ ಎದುರಾಗಿ ಯಾರೇ ನಿಂತರೂ ನಾವು ಹಿಂಜರಿಯುವುದಿಲ್ಲ. ಕ್ಷೇತ್ರದಲ್ಲಿ ನಮ್ಮ ಪಕ್ಷ ಅತ್ಯಂತ ಬಲಶಾಲಿಯಾಗಿದೆ. ಬಹುಷಃ ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ ಕಾಡಿರಬೇಕು ಎಂದು ವ್ಯಂಗ್ಯವಾಡಿದೆ.
1989ರಿಂದ ಭೋಪಾಲ್ ನಲ್ಲಿ ಬಿಜೆಪಿ ಸತತ ಗೆಲುವು ಸಾಧಿಸುತ್ತಾ ಬಂದಿದೆ. ಕರೀನಾ ಅವರ ಮಾವ ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ 1991ರಲ್ಲಿ ಲೋಕಸಭೆ ಚುನಾವಣೆಗೆ ನಿಂತು ಸೋಲು ಕಂಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com