ಹೆಗಲಿಗೆ ಕೈ ಹಾಕಿ ಸೆಲ್ಫಿ ತೆಗೆಯಲು ಮುಂದಾದ ಅಭಿಮಾನಿಗೆ ಗಾಯಕ ಸೋನು ನಿಗಂ ಮಾಡಿದ್ದೇನು?

ಬಾಲಿವುಡ್ ಗಾಯಕ ಸೋನು ನಿಗಂ ಅವರು ನಡೆದುಕೊಂಡು ಹೋಗುತ್ತಿದ್ದಾಗ ಸೆಲ್ಫಿ ತೆಗೆದುಕೊಳ್ಳಲು ...

Published: 23rd January 2019 12:00 PM  |   Last Updated: 23rd January 2019 11:09 AM   |  A+A-


Singer Sonu Nigam with a fan

ಅಭಿಮಾನಿ ಜೊತೆ ಗಾಯಕ ಸೋನು ನಿಗಂ

Posted By : SUD SUD
Source : Online Desk
ಬಾಲಿವುಡ್ ಗಾಯಕ ಸೋನು ನಿಗಂ ಅವರು ನಡೆದುಕೊಂಡು ಹೋಗುತ್ತಿದ್ದಾಗ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಅಭಿಮಾನಿಯ ಕೈ ಟ್ವಿಸ್ಟ್ ಮಾಡಿ ಸೆಲ್ಫಿಗೆ ನಗುತ್ತಾ ಫೋಸ್ ನೀಡಿರುವ ವಿಡಿಯೊ ವೈರಲ್ ಆಗಿದೆ.

ಅಭಿಮಾನಿ ತನ್ನ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಸೋನು ನಿಗಮ್ ಗೆ ಇಷ್ಟವಾಗಿರಲಿಲ್ಲ. ಆಗ ಸೋನು ನಿಗಂ ಸಿಟ್ಟಾಗಿದ್ದಾರೆ ಎಂದು ಅಕ್ಕಪಕ್ಕದಲ್ಲಿದ್ದವರು ಭಾವಿಸಿದರು. ಹೀಗಾಗಿ ಸೋನು ನಿಗಂ ಹೆಗಲ ಮೇಲೆ ಕೈ ಹಾಕಿದ ಅಭಿಮಾನಿಯ ಕೈ ತಿರುಗಿಸಿ ಆತನ ಹೆಗಲ ಮೇಲೆ ಕೈ ಹಾಕಿ ಸೆಲ್ಫಿಗೆ ಪೋಸ್ ನೀಡಿದ್ದಾರೆ.

ಸೋನು ಅಭಿಮಾನಿಯ ಕೈ ತಿರುಗಿಸಿ ಸೆಲ್ಫಿ ಕ್ಲಿಕ್ಕಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಕೆಲವರು ಸೋನು ನಿಗಂ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರೆ, ಮತ್ತೆ ಕೆಲವರು ಸೋನು ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ ಎಂದು ಬರೆದು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
facebook twitter whatsapp