40 ತುಂಬಿದ ಮೇಲೆ ಮಹಿಳೆಯರು ತುಂಬಾ 'ತುಂಟಿ': ವಿದ್ಯಾ ಬಾಲನ್

ಇದೇ ವರ್ಷ 40 ರ ವಸಂತಕ್ಕೆ ಕಾಲಿಟ್ಟ ವಿದ್ಯಾಬಾಲನ್, ಮಹಿಳೆಯರು ವಯಸ್ಸಾದಂತೆ ಹೇಗೆ ಹೆಚ್ಚು ಸಂತೋಷದಿಂದ ಆತ್ಮ ವಿಶ್ವಾಸದಿಂದ ಇರುತ್ತಾರೆ ಎಂದು ಹೇಳಿದ್ದಾರೆ.

Published: 31st January 2019 12:00 PM  |   Last Updated: 31st January 2019 05:24 AM   |  A+A-


Vidyabalan

ವಿದ್ಯಾ ಬಾಲನ್

Posted By : ABN ABN
Source : Online Desk
ಡರ್ಟಿ ಪಿಕ್ಟರ್ ನಲ್ಲಿ ಸಿಲ್ಮ್ ಸ್ಮಿತಾ ಪಾತ್ರದಲ್ಲಿ ಬೋಲ್ಡ್ ಆಗಿ ಪ್ರಸಿದ್ಧಿಗೆ ಬಂದ ವಿದ್ಯಾಬಾಲನ್  ತುಮಾರೆ ಸುಲು ಚಿತ್ರದ ಬಗ್ಗೆ ಹೆಚ್ಚಿನ ಮಹತ್ವಕಾಂಕ್ಷೆ ಇಟ್ಟುಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ನಾನಾ ರೀತಿಯಲ್ಲಿ ಕಾಣಿಸಿಕೊಂಡಿರುವ ವಿದ್ಯಾಬಾಲನ್, ಮಹಿಳಾ ಕೇಂದ್ರಿತ ಪಾತ್ರದಿಂದಾಗಿ ಬಾಲಿವುಡ್ ನಲ್ಲಿ ಟೀಕೆಗಳ ಹೊರತಾಗಿಯೂ ತನ್ನದೇ ಆದ ವರ್ಚಸ್ಸು ಹೊಂದಿದ್ದಾರೆ.

ಇದೇ ವರ್ಷ 40 ರ ವಸಂತಕ್ಕೆ ಕಾಲಿಟ್ಟ ವಿದ್ಯಾಬಾಲನ್, ಮಹಿಳೆಯರು ವಯಸ್ಸಾದಂತೆ ಹೇಗೆ ಹೆಚ್ಚು ಸಂತೋಷದಿಂದ ಆತ್ಮ ವಿಶ್ವಾಸದಿಂದ ಇರುತ್ತಾರೆ ಎಂಬ ವಿಚಾರ ಕುರಿತಂತೆ ಮಾತನಾಡಿದ್ದಾರೆ.

ಮಹಿಳೆಯರು 40 ವರ್ಷ ತುಂಬಿದ ನಂತರ ಹಾಟ್ ಹಾಗೂ ನಾಟಿಯಾಗಿ ಕಾಣುತ್ತಾರೆ.  ಸಾಮಾನ್ಯವಾಗಿ ನಾವೆಲ್ಲ ಸಂಕೋಚದಿಂದಿರಬೇಕು ಮತ್ತು ಲೈಂಗಿಕತೆಯನ್ನು ಸುಖಿಸಬಾರದು ಎಂದು ಕಲಿತಿರುತ್ತೇವೆ. ಆದರೆ, ವಯಸ್ಸಾದಂತೆ ಮಹಿಳೆಯರು ಹೆಚ್ಚು ಸ್ಥಿತ ಪ್ರಜ್ಞರಾಗುತ್ತರಾರೆ. ಏಕೆಂದರೆ, ಆಗ ಅವರು ಬೇರೆಯವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಕೇವಲ ಅವರ ಬಗ್ಗೆಯಷ್ಟೇ ಯೋಚಿಸಿರುತ್ತಾರೆ. ಇದರಿಂದ ಹೆಚ್ಚು ಖುಷಿಯಾಗಿರುತ್ತಾರೆ ಎಂದು ಹೇಳಿದರು.

ವಿದ್ಯಾಬಾಲನ್  ಸ್ನೇಹಿತನೊಬ್ಬ ಬಹಳ ದಿನಗಳಿಂದ ಪ್ರೇಮ ಸಂಬಂಧ ಕಡಿದುಕೊಳ್ಳುವ ಬಗ್ಗೆ ಮಹಿಳೆಯೊಂದಿಗೆ ಮಾತುಕತೆ ನಡೆಸುತ್ತಲೇ ಇದ್ದನಂತೆ. ಆದರೆ, 35ರ ನಂತರ ಆಕೆ ಆ ಬಗ್ಗೆ ತಲೆಕೆಡಿಸಿಕೊಳ್ಳುವದನ್ನೇ ಬಿಟ್ಟಳಂತೆ. 40ರ ನಂತರವಂತೂ ಕೇಳುವುದೇ ಬೇಡ ಎಂದು ಅವನು ಹೇಳುತ್ತಿದ್ದ ಎಂದು ವಿದ್ಯಾಬಾಲನ್ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರಸಿದ್ಧ ಗಣಿತಶಾಸ್ತ್ರಜ್ಞರಾದ ಶಂಕುತಲಾ ಬಯೋಪಿಕ್ ನಲ್ಲಿ ವಿದ್ಯಾಬಾಲನ್  ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ  ಸನ್ಯಾ ಮಲ್ದೋತ್ರಾ  ಆಕೆಯ ಮಗಳಾಗಿ ನಟಿಸಲಿದ್ದಾರೆ ಎಂಬುದು ತಿಳಿದುಬಂದಿದೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp