ಹರ್ಯಾಣ ಚಂಡಮಾರುತ ಕಪಿಲ್ ದೇವ್: '83'ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ ಅವರ 34ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ...

Published: 06th July 2019 12:00 PM  |   Last Updated: 06th July 2019 02:43 AM   |  A+A-


Ranaveer Singh first look

ರಣವೀರ್ ಸಿಂಗ್ ಫಸ್ಟ್ ಲುಕ್

Posted By : SUD SUD
Source : ANI
ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಅವರ 34ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ವಿಚಾರ ಸಿಕ್ಕಿದೆ. ತಮ್ಮ ಮುಂಬರುವ ಚಿತ್ರ 83ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ಹರ್ಯಾಣ ಚಂಡಮಾರುತ ಎಂದು ಕರೆದುಕೊಂಡಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನ ಕಥೆಯಾಧಾರಿತ ಚಿತ್ರದಲ್ಲಿ ನಟಿಸುತ್ತಿರುವ ರಣವೀರ್ ಸಿಂಗ್ ಹೇಗೆ ಕಾಣಬಹುದು ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. 1983ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಕಪಿಲ್ ದೇವ್ ಅವರ ನೇತೃತ್ವದ ಟೀಂ ಇಂಡಿಯಾ ಬಗ್ಗೆ ಚಿತ್ರದಲ್ಲಿ ಇರಲಿದೆ.

ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ರಣವೀರ್ ಸಿಂಗ್, ನನ್ನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಹರ್ಯಾಣ ಚಂಡಮಾರುತ ಕಪಿಲ್ ದೇವ್ ಅವರನ್ನು ಪ್ರಸ್ತುತಪಡಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಬಿಳಿ ಜೆರ್ಸಿಯಲ್ಲಿ ಚೆಂಡನ್ನು ಸ್ಪಿನ್ ಮಾಡುವ ಫೋಟೋ ಇದ್ದು ಮಾಜಿ ಭಾರತೀಯ ಕ್ರಿಕೆಟ್ ನಾಯಕನೊಂದಿಗೆ ವಿಲಕ್ಷಣವಾದ ಹೋಲಿಕೆಯನ್ನು ಹೊಂದಿದೆ.

ರಣವೀರ್ ಸಿಂಗ್ ಫೋಟೋಗೆ ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp